ಬೆಂಗಳೂರು : ಕಸದ ತೊಟ್ಟಿಯ ಬಳಿ ಮಾನವನ ಬುರುಡೆ ಸೇರಿ ಇತರೆ ಭಾಗದ ಮೂಳೆಗಳು ಪತ್ತೆಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೋವಿಂದಶೆಟ್ಟಿಪಾಳ್ಯದ ಗಣೇಶ ದೇವಸ್ಥಾನದ ಹತ್ತಿರ ಪತ್ತೆಯಾಗಿದೆ.
ಕಸೆ ಎಸೆಯಲು ಬಂದವರು ಮಾನವನ ತಲೆ ಬುರುಡೆ ಹಾಗೂ ಇತರೆ ಭಾಗದ ಮೂಳೆಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಮಾಟ ಮಂತ್ರಕ್ಕಾಗಿ ಈ ಮೂಳೆಗಳನ್ನು ಬಳಸಲಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.