ಬೆಂಗಳೂರು: ಧರ್ಮಸ್ಥಳದ ವಿರುದ್ದ ಷಡ್ಯಂತ್ರ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಧರ್ಮಸಂರಕ್ಷಣಾ ಸಮಾವೇಶ ನಡೆಸಲಾಗುತ್ತಿದೆ.
ಅಂದು ತಿರುಪತಿ,ಶಬರಿಮಲೆ, ಈಶಾ ಫೌಂಡೇಶನ್ ವಿರುದ್ಧ ಷಡ್ಯಂತ್ರ ನಡೆಸಲಾಯಿತು. ಈಗ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಹೂಡಿರುವ ಎಡಪಂಥೀಯರು, ಹಿಂದೂ ವಿರೋಧಿಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆ, ವಚಾನನಂದ ಸ್ವಾಮೀಜಿ, ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.



















