ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿಗಳಿಗಾಗಿ 63 ಕೋಟಿ ಸಾಲ ಮಾಡಿದೆ ಎಂದು ಸಿಎಜಿ ವರದಿಯಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದ್ದು, ಪರಿಷತ್ ಸದಸ್ಯ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ರವಿ, ಕಾಂಗ್ರೆಸ್ ಸಾಲ ಭವಿಷ್ಯದಲ್ಲಿ ಪರಿಣಾಮ ಬೀರಲಿದೆ. ಸಾಧನೆ ಸೊನ್ನೆ, ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾತ್ರೆ ಮಾಡುತ್ತಿದೆ. ನಾವು ಖಜಾನೆಗೆ ಮಾಲೀಕರಲ್ಲ. ನಾವು ಖಜಾನೆಯ ಟ್ರಸ್ಟಿ, ಒಂದೊಂದೂ ರೂಪಾಯಿಯನ್ನೂ ಜನರ ಹಿತಕ್ಕೆ ಬಳಸಬೇಕು, ಆದರೆ ಈ ಸರ್ಕಾರ ಸಾಧನೆ ಮಾಡದೇ ಜನರ ಹಣ ಪೋಲು ಮಾಡಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಈ ನಡೆ ಖಂಡನೀಯ. “ವಿಜಯನಗರ ಸಮಾವೇಶ ನಿಮ್ಮ ಪಕ್ಷದ ಸಮಾವೇಶ, ಪಕ್ಷದ ಹಣದಲ್ಲಿ ಸಮಾವೇಶ ಮಾಡಿ, ಸರ್ಕಾರದ ಹಣ ಮತ್ತು ಜನರ ಹಣ ಯಾಕೆ ಬಳಸುತ್ತೀರಿ..?” ಎಂದು ಕಟುವಾಗಿ ಪ್ರಶ್ನಿಸಿದ್ದಲ್ಲದೇ, ಪೋಲು ಮಾಡಿದ ಜನರ ಹಣವನ್ನು ವಾಪಸ್ ಸರ್ಕಾರಕ್ಕೆ ತುಂಬಿ ಎಂದು ಕಾಂಗ್ರೆಸ್ ವಿರುದ್ಧ ರವಿ ಆಕ್ರೋಶ ಹೊರಹಾಕಿದ್ದಾರೆ.



















