ಬೆಂಗಳೂರು: ಸಾಲ ಮಾಡಿ ತುಪ್ಪ ತಿನ್ನುವ ಚಾರ್ವಾಕ ನೀತಿ ರಾಜ್ಯದ ಮೂಲ ಸೌಕರ್ಯಗಳ ಮೇಲೆ ಪರಿಣಾಮ ಈಗಲೇ ಪರಿಣಾಮ ಬೀರಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ಸಿ.ಟಿ.ರವಿ, ಮುಳುಗುವ ಹಡಗಿನಲ್ಲಿ ಕುಳಿತ ಪರಿಸ್ಥಿತಿ ರಾಜ್ಯದ ಜನರದ್ದಾಗಿದ್ದು, ಆ ಹಡಗಿನ ಕ್ಯಾಪ್ಟನ್ ಸಿದ್ದರಾಮಯ್ಯ ಲೈಫ್ ಜಾಕೆಟ್ ಹಾಕಿಕೊಂಡರೆ ನೀವು ಉಳಿಯುತ್ತೀರಿ ಎಂದು ಸಿಎಜಿ(Comptroller and Auditor General) ಎಚ್ಚರಿಸಿದೆ ಎಂದು ತಿಳಿಸಿದ್ದಾರೆ.
ಗ್ಯಾರಂಟಿಗೋಸ್ಕರ 63 ಸಾವಿರ ಕೋಟಿ ಸಾಲಕ್ಕೆ ಮೊರೆ ಹೋಗಿರುವ ಕುರಿತಾಗಿ ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ. ಇವೆಲ್ಲವೂ ಆರ್ಥಿಕ ಸ್ಥಿತಿ ಹಳಿ ತಪ್ಪಿರುವುದನ್ನು ಸ್ಪಷ್ಟಪಡಿಸುತ್ತಿದ್ದು, ಇದು ಭವಿಷ್ಯದಲ್ಲಿ ರಾಜ್ಯದ ಜನತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.