ಬೆಂಗಳೂರು: ವಾಟ್ಸ್ ಆ್ಯಪ್ ಈಗ ಕೇವಲ ಮೆಸೇಜಿಂಗ್ ಜಾಲತಾಣವಾಗಿ ಉಳಿದಿಲ್ಲ. ಇದರ ಮೂಲಕ ಹಣವನ್ನು ಕೂಡ ಕಳುಹಿಸಬಹುದಾಗಿದೆ. ಇದರ ಬೆನ್ನಲ್ಲೇ, ಸ್ಟಾಕ್ ಬ್ರೋಕರ್ ಕಂಪನಿಯಾಗಿರುವ ಜೆರೋಧಾ ಈಗ ವಾಟ್ಸ್ ಆ್ಯಪ್ ಮೂಲಕವೇ ಟ್ರೇಡಿಂಗ್ ಮಾಡುವ ಫೀಚರ್ ಅನ್ನು ಪರಿಚಯಿಸಿದೆ. ಈಗ ವಾಟ್ಸ್ ಆ್ಯಪ್ ನಲ್ಲೇ ಜನ ಹೂಡಿಕೆ ಮಾಡಬಹುದಾಗಿದೆ. ಎಮರ್ಜೆನ್ಸಿ ಟ್ರೇಡಿಂಗ್ ಗಾಗಿ ಕಂಪನಿಯು ವಾಟ್ಸ್ ಆ್ಯಪ್ ಬೇಸ್ಡ್ ಕೈಟ್ ಬ್ಯಾಕಪ್ ಎಂಬ ಆಯ್ಕೆಯನ್ನು ಪರಿಚಯಿಸಿದೆ.
ಹೊಸ ಪ್ಲಾಟ್ಫಾರ್ಮ್ನಲ್ಲಿರುವ ಪ್ರಕ್ರಿಯೆ ಎಲ್ಲ ಕೆವೈಸಿ ದೃಢೀಕೃತ ಹೂಡಿಕೆದಾರರಿಗೆ ಲಭ್ಯವಿದೆ. ಹೊಸಬರು ಕೂಡ ಇದೇ ವಾಟ್ಸ್ ಆ್ಯಪ್ ಮೂಲಕವೇ ತಮ್ಮ ನೊಂದಾವಣೆ ಪ್ರಕ್ರಿಯೆ ಮುಗಿಸಿ ಹೂಡಿಕೆಯನ್ನು ಪ್ರಾರಂಭಿಸಬಹುದಾಗಿದೆ. ಇದು ಮೊಟ್ಟಮೊದಲ ಬಾರಿಗೆ ಹೂಡಿಕೆಗೆ ಬರುವವರಿಗೆ ಅನುಕೂಲವಾಗುವಂತಹ ಸರಳ ಮತ್ತು ಸಮರ್ಥ ವಿಧಾನವಾಗಿದೆ ಎಂದು ಹೇಳಲಾಗುತ್ತಿದೆ.
ವಾಟ್ಸ್ಆ್ಯಪ್ ಮೂಲಕ ಹೂಡಿಕೆ ಹೇಗೆ?
- ಮೊಬೈಲ್ ನಲ್ಲಿ ಮೊದಲಿಗೆ +91 99644 52020 ನಂಬರ್ ಸೇವ್ ಮಾಡಿಕೊಳ್ಳಬೇಕು
- ವಾಟ್ಸ್ ಆ್ಯಪ್ ನಲ್ಲಿ Hi ಎಂದು ಮೆಸೇಜ್ ಮಾಡಬೇಕು
- ನಿಮ್ಮ ಜೆರೋಧಾ ಯೂಸರ್ ಐಡಿ, ಪಾಸ್ ವರ್ಡ್ ನಮೂದಿಸಬೇಕು
- ವೇರಿಫಿಕೇಶನ್ ಮುಗಿಸಿದ ಬಳಿಕ ಒಟಿಪಿ ನಮೂದಿಸಬೇಕು
- ಇದಾದ ಬಳಿಕ ಷೇರು ಮಾರುಕಟ್ಟೆ ಮಾಹಿತಿ, ನೀವು ಆರ್ಡರ್ ಮಾಡಿರುವುದನ್ನು ಕ್ಯಾನ್ಸಲ್ ಮಾಡುವುದು, ನಿಮ್ಮ ಪೋರ್ಟ್ ಫೋಲಿಯೊ, ಲಭ್ಯವಿರುವ ಫಂಡ್ ಗಳನ್ನು ನೋಡಿಕೊಂಡು ಹೂಡಿಕೆ ಮಾಡಬಹುದು.
ಗಮನಿಸಿ: ವಾಟ್ಸ್ ಆ್ಯಪ್ ಮೂಲಕ ಜೆರೋಧಾ ಫೀಚರ್ ಬಳಸಿ ಹೂಡಿಕೆ ಮಾಡುವ ಕುರಿತ ಸ್ಟೋರಿಯನ್ನು ನಾವು ಮಾಹಿತಿ ದೃಷ್ಟಿಯಿಂದ ಮಾತ್ರ ಪ್ರಕಟಿಸಿದ್ದೇವೆ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರನ್ನು ಸಂಪರ್ಕಿಸುವುದು, ಅವರ ಸಲಹೆ-ಸೂಚನೆ ಪಡೆಯುವುದು ಕಡ್ಡಾಯವಾಗಿದೆ.



















