ಬೆಂಗಳೂರು : ಟ್ರಾಫಿಕ್ ಸಮಸ್ಯೆ ಗೆ ಪರಿಹಾರ ನೀಡುವ ಉದ್ದೇಶದಿಂದ ಹೆಬ್ಬಾಳ ಫ್ಲೈಓವರ್ ಮಾಡಲು ಈ ಹಿಂದೆ ಯೋಜನೆ ರೂಪಿಸಲಾಗಿತ್ತು. ಆದರೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರಲಿಲ್ಲ ಎಂದು ಡಿಸಿಎಂ ಡಿ,ಕೆ ಶಿವಕುಮಾರ್ ಹೇಳಿದ್ದಾರೆ.
ಹೆಬ್ಬಾಳದ ಬಹುನಿರೀಕ್ಷಿತ ಫ್ಲೈಓವರ್ ಗೆ ಹಸಿರು ನಿಶಾನೆ ತೋರಿದ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ನಾನು ಅಧಿಕಾರಕ್ಕೆ ನಂತರ ಈ ಯೋಜನೆಗೆ ಅನುಮತಿ ನೀಡಿ ಅನುಧಾನ ಬಿಡುಗಡೆ ಮಾಡಲಾಗಿತ್ತು. ಈ ಫ್ಲೈಓವರ್ ಗೆ ಒಟ್ಟು 300 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇದುವರೆಗೆ 180 ಕೋಟಿ ರೂ. ಖರ್ಚಾಗಿದೆ. ಇದಕ್ಕೆ ಇನ್ನೊಂದು ಜಂಕ್ಷನ್ ಸೇರಿದರೇ 6 ಲೇನ್ ಆಗುತ್ತದೆ ಹಾಗೂ ಮೂರು ತಿಂಗಳಲ್ಲಿ ಇನ್ನೊಂದು ಲೂಪ್ ಬರಲಿದೆ ಎಂದು ತಿಳಿಸಿದ್ದಾರೆ.
ಎಸ್ಟಿಮ್ ಮಾಲ್ ನಿಂದ ಒಂದುವರೆ ಕಿ.ಮೀ ತನಕ ಟನಲ್ ಆಗಲಿದೆ, ತುರ್ತು ಸಂದರ್ಭದಲ್ಲಿ ಇದರ ಬಳಕೆಯಾಗುತ್ತದೆ. ಏರ್ಪೋರ್ಟ್ ನಿಂದ ಬರುವವರಿಗೆ ಅನುಕೂಲವಾಗಲಿದ್ದು, ಟನಲ್ ಯೋಜನೆ ಸದ್ಯದಲ್ಲಿಯೇ ಶುರುವಾಗಲಿದೆ ಎಂದಿದ್ದಾರೆ.
ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಒಂದು ವಾರದಲ್ಕಿ ಸಾಕ್ಷಿ ನೀಡುವಂತೆ ತಾಕೀತು ಮಾಡಿದ ವಿಚಾರವಾಗಿ ಪ್ರತ್ಯೇಕವಾಗಿ ಮಾತನಾಡುತ್ತೇನಂದಷ್ಟೇ ಹೇಳಿದ್ದಾರೆ.
ಇನ್ನು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ, ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ʼಬಿಜೆಪಿಯಿಂದ ಧರ್ಮಸ್ಥಳ ಚಲೋʼ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಧರ್ಮಸ್ಥಳಕ್ಕೆ ರಾಜಕಾರಣ ಬೆರೆಸಿಕೊಂಡು, ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.