ಕೊಪ್ಪಳ: ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ಇರುವ ಐತಿಹಾಸಿಕ ಶಕ್ತಿ ಕೇಂದ್ರ ಹುಲಿಗೇಮ್ಮ ದೇವಸ್ಥಾನದಲ್ಲಿಆ. 26 ರಂದು ತುಂಗಾಭದ್ರಾ ಆರತಿ ಉತ್ಸವ ಆಚರಿಸಲು ದೇವಾಸ್ಥನದ ಪ್ರಾಧಿಕಾರ ಸಜ್ಜಾಗಿದೆ.
ಕೊಪ್ಪಳದ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿಸಮಿತಿಯ ಸಭೆ ನಡೆಸಿ, ಧಾರ್ಮಿಕ ದತ್ತಿ ಇಲಾಖೆ ಮತ್ತು ಶ್ರೀ ಹುಲಿಗೇಮ್ಮ ದೇವಿ ದೇವಸ್ಥಾನದ ಪ್ರಾಧಿಕಾರದಿಂದ ತುಂಗಾಭದ್ರಾ ಆರತಿ ಉತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲು ನಿರ್ಧಾರ ಮಾಡಲಾಗಿದೆ.
ತುಂಗಾಭದ್ರಾ ಆರತಿ ಕಾರ್ಯಕ್ರಮದಲ್ಲಿ ಮುಜರಾಯಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಭಾಗಿಯಾಗಲಿದ್ದಾರೆ.