ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ದೂರದ ಊರುಗಳಿಂದ ಬರುವವರಿಗೆ ಬೆಳಗ್ಗೆ ಮೆಟ್ರೋ ಸೇವೆ ಆರಂಭಿಸಲು ಮುಂದಾಗಿದೆ.
ಆ. 18ರಂದು ಎಲ್ಲೋ ಲೈನ್ ಬೆಳಗ್ಗೆ 5ಕ್ಕೆ ಮೆಟ್ರೋ ಸೇವೆ ಆರಂಭಿಸುತ್ತಿದೆ. ಮೊದಲ ಮೆಟ್ರೋ ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ತೆರಳಲಿದೆ. ಆದರೆ, ಮಂಗಳವಾರದಿಂದ ಎಂದಿನಂತೆ ಬೆಳಗ್ಗೆ 6.30ರಿಂದ ಮೆಟ್ರೋ ಸೇವೆ ಆರಂಭವಾಗಲಿದೆ. ಅದೇ ರೀತಿ ನೇರಳೆ, ಹಸಿರು ಮಾರ್ಗ ಮೆಟ್ರೋ ಸೋಮವಾರ ಬೆಳಗ್ಗೆ 4.15ರಿಂದಲೇ ತನ್ನ ಸೇವೆ ಆರಂಭಿಸಲಿದೆ.
ರಜೆಯ ಹಿನ್ನೆಲೆಯಲ್ಲಿ ಊರಿಗೆ ತೆರಳಿರುವ ಜನರಿಗೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಈ ಸೇವೆ ಆರಂಭಿಸಲಾಗಿದೆ. ಉಳಿದಂತೆ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸೇವೆ ಇರಲಿದೆ. ಭಾನುವಾರ ದಿನ ಬೆಳಗ್ಗೆ 7ರಿಂದ ಮೆಟ್ರೋ ಕಾರ್ಯಾಚರಣೆ ನಡೆಸಲಿದೆ ಎಂದು ನಮ್ಮ ಮೆಟ್ರೋ ಬಿಎಂಆರ್ ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.