ಬೆಂಗಳೂರು: ಹೆಣ್ಣು ಮಕ್ಕಳಿಗೆ ಈಗ ಧೈರ್ಯ ಬಂದಿದೆ ಎಂದು ಮೋಹಕ ತಾರೆ ರಮ್ಯಾ ಅಭಿಪ್ರಾಯ ಪಟ್ಟಿದ್ದಾರೆ.
ನಗರದಲ್ಲಿ ಖಾಸಗಿ ಶೋರೂಂ ಉದ್ಘಾಟನೆಗೆ ಆಗಮಿಸಿದ್ದ ಅವರು, ಇತ್ತೀಚೆಗೆ ಕೆಟ್ಟ ಕಮೆಂಟ್ ಗಳು ಬರುತ್ತಿಲ್ಲ. ಐ ಫೀಲ್ ಲೈಕ್ ಒಳ್ಳೆಯದಾಗಿದೆ. ಎಷ್ಟೋ ಜನ ಫೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟಿದ್ದಾರೆ. ಮತ್ತಷ್ಟು ಜನ ಅರೆಸ್ಟ್ ಆಗಿದ್ದಾರೆ ಎಂದಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಇದು ಒಳ್ಳೆಯ ಬೆಳವಣಿಗೆ. ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಈ ಮೂಲಕ ಒಳ್ಳೆ ಸಂದೇಶ ಕೊಡಬಹುದು. ಅವರು ಕೂಡ ಹೆಣ್ಣು. ಹೀಗಾಗಿ ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
ಸ್ಟಾರ್ ಗಳು ಇದ್ದರೆ ಮಾತ್ರ ಸಿನಿಮಾ ನೋಡಲು ಜನ ಬರುತ್ತಾರೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ಸ್ಟಾರ್ ನಟರ ಸಿನಿಮಾ ಮಾತ್ರ ಓಡುತ್ತೆ ಅಂತ ಏನಿಲ್ಲ. ಸ್ಟೋರಿ ಚೆನ್ನಾಗಿದ್ದರೆ ಜನರು ಥಿಯೇಟರ್ ಗೆ ಬರುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಸು ಫ್ರಂ ಸೋ. ಹೆಚ್ಚು ಬಜೆಟ್ ಇರಬೇಕು. ಸ್ಟಾರ್ ನಟರೇ ಇರಬೇಕು ಅಂತೇನಿಲ್ಲ ಎಂದಿದ್ದಾರೆ.