ಕೊಪ್ಪಳ: ತುಂಗಭದ್ರಾ ಜಲಾಶಯದ 7 ಕ್ರಸ್ಟ್ ಗೇಟ್ ದುರ್ಬಲವಾಗಿವೆ ಎಂದು ಆರೋಪಿಸಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ದಡೇಸೂಗುರು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ರಾಜ್ಯ ಹಾಗೂ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಆಗಿದೆ. ಕಳೆದ ವರ್ಷ ಜಲಾಶಯದ ಕ್ರಸ್ಟ್ ಗೇಟ್ ಕಳಚಿ ಬಿದ್ದಿತ್ತು. ಆದರೆ, ಇಲ್ಲಿಯವರೆಗೂ ಗೇಟ್ ಅಳವಡಿಕೆ ಮಾಡಿಲ್ಲ. ಈಗ ಇದೇ ವಿಷಯವಾಗಿ ಟಿ.ಬಿ ಬೋರ್ಡ್ ಹಾಗೂ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ತಂಗಡಗಿ ಆರೋಪಿಸುತ್ತಿದ್ದಾರೆ.
ಶಿವರಾಜ ತಂಗಡಗಿ ಓರ್ವ ಮಂತ್ರಿಯಾಗಿ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿದ್ದರೂ ಇಲ್ಲಿಯವರೆಗೆ ದುರ್ಬಲ ಗೇಟ್ ಸರಿಪಡಿಸಲು ಆಗುತ್ತಿಲ್ಲ ಎನ್ನುವುದು ದುರ್ದೈವವೇ ಸರಿ ಎಂದು ಆರೋಪಿಸಿದ್ದಾರೆ.
ಇಲ್ಲಿಯವರೆಗೆ 6 ಗೇಟ್ ಗಳು ಬೆಂಡ್ ಆಗಿವೆ ಎಂದು ಹೇಳುತ್ತಿದ್ದಾನೆ. ಆದರೆ, ಇಲ್ಲಿಯವರೆಗೆ ಮಲಗಿದ್ದನಾ? ಈ ಜಿಲ್ಲಾ ಉಸ್ತುವಾರಿ ಸಚಿವನಿಗೆ ತಿಳುವಳಿಕೆ ಕಡಿಮೆಯಿದೆ. ಇದು ಮೂರು ರಾಜ್ಯಕ್ಕೆ ಸಂಬಂಧಪಟ್ಟಿದ್ದು, ಈತ ಸಚಿವನಾಗಿ ಬುದ್ಧಿ ಇದ್ದು ಮಾತನಾಡುತ್ತಿದ್ದಾನಾ? ಅಥವಾ ಬುದ್ಧಿ ಇಲ್ಲದೆ ಮಾತನಾಡುತ್ತಿದ್ದಾನಾ? ಎಂದು ಪ್ರಶ್ನಿಸಿ ಏಕವಚನದಲ್ಲೇ ಕಿಡಿಕಾರಿದ್ದಾರೆ.