ನವ ದೆಹಲಿ : ಪತ್ರಕರ್ತರು ಪ್ರಕಟಿಸುವ ಸುದ್ದಿಗಳು, ಲೇಖನಗಳು ಅಥವಾ ವೀಡಿಯೋಗಳು ದೇಶದ ಏಕತೆ ಹಾಗೂ ಸಮಗ್ರತೆಗೆ ಅಪಾಯವನ್ನುಂಟು ಮಾಡುವುದಿಲ್ಲ. ಆದ್ದರಿಂದ, 152ರಡಿ ದೇಶದ್ರೋಹ ಪ್ರಕರಣವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ದೇಶದ ಏಕತೆ, ಸಮಗ್ರತೆಗೆ ಒಂದು ಲೇಖನ ಅಪಾಯವೇ? ಇದು ಲೇಖನವಷ್ಟೇ, ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲ. ಲೇಖನ ಬರೆದ ಮಾತ್ರಕ್ಕೆ ಪತ್ರಕರ್ತರು ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಕೇ? ಬಂಧಿತರಾಗಬೇಕೇ? ಇದರಿಂದ ಕಾನೂನು ದುರುಪಯೋಗವಾಗಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ʼಆಪರೇಷನ್ ಸಿಂದೂರʼದ ಸಂದರ್ಭದಲ್ಲಿ ಭಾರತೀಯ ಜೆಟ್‌ಗಳು ಪತನವಾಗಿದೆ ಎಂದು ವರದಿ ಮಾಡಿದ್ದಕ್ಕಾಗಿ ‘ದಿ ವೈರ್’ ಸಂಪಾದಕ ಸೇರಿ ಇತರರ ವಿರುದ್ಧ ಅಸ್ಸಾಂನಲ್ಲಿ ಎಫ್‌ಐಆರ್ ದಾಖಲಾಗಿತ್ತು.