ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ವ್ಯಕ್ತಿಯ ವಿಚಾರಣೆ ನಡೆಯುತ್ತಿದೆ. ಎಸ್‌ಐಟಿ ಈಗಾಗಲೇ ಅರ್ಧ ತಿಂಗಳು ಕೆಲಸ ಮಾಡಿದೆ. ಕಳೆದೆರಡು ವಾರಗಳಿಂದ ಎಸ್‌ಐಟಿ ನಿರಂತರವಾಗಿ ಉತ್ಖನನ ಕಾರ್ಯ ಮಾಡುತ್ತಲೇ ಇದೆ.
ಸಾಕ್ಷಿ ದೂರುದಾರ ಕೊಟ್ಟ ದೂರು ಸತ್ಯವೇ ಅಥವಾ ಸುಳ್ಲೇ ? ಎಂದು ವಿಚಾರಣೆ ಜೊತೆ ತನಿಖೆ ನಡೆಸುತ್ತಿದೆ. ಇಂದು ತೀವ್ರ ಕುತೂಹಲ ಕೆರಳಿದ್ದ ಸ್ಥಳ ನಂ.13ರಲ್ಲಿ ಉತ್ಖನನ ಕಾರ್ಯ ನಡೆಸುತ್ತಿದೆ.
ಮೊದಲಿಗೆ ಮೌಂಡೆಟ್ ಜಿಪಿಆರ್ ಡ್ರೋನ್‌ನಲ್ಲಿ ಉತ್ಖನನ ನಡೆಸಿದ ನಂತರ ಏಕಕಾಲಕ್ಕೆ ಎರಡು ಹಿಟಾಚಿ ಬಳಸಿ ಗುಂಡಿ ಅಗೆಯಲಾಗುತ್ತಿದೆ. 20 ವರ್ಷಗಳಲ್ಲಿ ಹಿಂದೆ ಭೌಗೋಳಿಕವಾಗಿ ಬದಲಾವಣೆ ಆಗಿರುವ ಹಿನ್ನೆಲೆ, ಗುರುತು ಮಾಡಿರುವ ಪ್ರದೇಶವನ್ನು ಸಮತಟ್ಟುಗೊಳಿಸಲಾಗುತ್ತದೆ. ಬಳಿಕ ಮತ್ತೊಮ್ಮೆ ಡ್ರೋನ್ ಜಿಪಿಆರ್ ಮೂಲಕ ತಪಾಸಣೆ ನಡೆಸಿ ಅಸ್ಥಿಪಂಜರಕ್ಕೆ ಶೋಧಿಸಲು ಎಸ್‌ಐಟಿ ಮುಂದಾಗಲಿದೆ.
ಎಸ್‌ಐಟಿ ಅಧಿಕಾರಿಗಳು ಬಹಳ ಮುತುವರ್ಜಿಯಿಂದ ಎಲ್ಲಾ ತನಿಖೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು ಮತ್ತು ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಪಂಚಾಯತ್, ಠಾಣೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಆ ಕಾಲಮಾನದಲ್ಲಿ ಕೆಲಸ ಮಾಡಿದ ಎಲ್ಲರ ಸಾಕ್ಷಿಗಳ ಸಂಗ್ರಹ ನಡೆಸಲಾಗುತ್ತಿದೆ.