ಬೆಂಗಳೂರು : ಆರ್.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಪ್ರಾಣ ಕಳದುಕೊಂಡಿದ್ದಾರೆ. ಕಪ್ಪು ಆರ್.ಸಿ.ಬಿ ತಂಡದ್ದು, ತಪ್ಪು ಸರ್ಕಾರದ್ದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಮುಂಗಾರು ಅಧಿವೇಶನಕ್ಕೂ ಮುನ್ನಾ ಬಿಜೆಪಿ-ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತ್ತು. ಬಳಿಕ ಕರ್ನಾಟಕ ನ್ಯೂಸ್ ಬೀಟ್ ನೊಂದಿಗೆ ಮಾತನಾಡಿದ ಅವರು, ಮೊದಲನೇ ದಿನ ಪೊಲೀಸರ ತಪ್ಪಿಲ್ಲವೆಂದು ಹೇಳಿದರು. ಸರ್ಕಾರದ ತಪ್ಪೆಂದು ಯಾವಾಗ ತಿಳಿಯಿತೋ ಆಗ ಪೊಲೀಸರ ಮೇಲೆ ತಪ್ಪು ಹೋರಿಸಿದರು. ಎರಡೆರಡು ಕಡೆಗಳಲ್ಲಿ ಕಾರ್ಯಕ್ರಮಗಳು ಬೇಡ ಎಂದು ಪೊಲೀಸರು ಮೊದಲೇ ಹೇಳಿದ್ದರು. ರಾಜಕೀಯ ಲಾಭಕ್ಕಾಗಿ ಹನ್ನೊಂದು ಮಂದಿಯನ್ನು ಕಾಂಗ್ರೆಸ್ ಸರ್ಕಾರ ಬಲಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.