ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು(ಭಾನುವಾರ) ಬೆಂಗಳೂರಿನ ಕೆ.ಎಸ್.ಆರ್ ರೈಲು ನಿಲ್ದಾಣದಲ್ಲಿ 3 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲಿಗೆ ಬೆಳಗ್ಗೆ 11.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ.
ರೈಲಿನ ಒಳಗೆ ಪ್ರವೇಶಿಸಿದ ಮೋದಿ ಕೆಲಕಾಲ ಮಕ್ಕಳೊಂದಿಗೆ, ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ವಂದೇ ಭಾರತ್ ರೈಲನ್ನು ಅದ್ಧೂರಿಯಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು.
ಇನ್ನು, ಇದೇ ಸಂದರ್ಭದಲ್ಲಿ ನಾಗ್ಪುರದ ಅಜ್ನಿ-ಪುಣೆ ಹಾಗೂ ಅಮೃತಸರ- ಶ್ರೀ ಮಾತಾ ವೈಷ್ಣವೋ ದೇವಿ ಕಾತ್ರಾ ನಡುವಿನ ಹೊಸ ವಂದೇ ಭಾರತ್ ರೈಲುಗಳಿಗೂ ಇಲ್ಲಿಂದಲೇ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.



















