ಕೊಪ್ಪಳ: ನಗರದ ಗವಿಸಿದ್ದಪ್ಪ ನಾಯಕನ ಕೊಲೆ ಪ್ರಕರಣ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಗವಿಸಿದ್ದಪ್ಪನ ತಂದೆ ನಿಂಗಜ್ಜ ಸಾರ್ವಜನಿಕರ ಮುಂದೆ ಅವಲತ್ತುಕೊಂಡಿದ್ದಾರೆ.
ನನ್ನ ಮಗನ ಸಾವಿಗೆ ನ್ಯಾಯಕ್ಕಾಗಿ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಬೀದಿಯಲ್ಲಿ ಮಗನ ಪೋಟೋ ಹಿಡಿದು ಸಾರ್ವಜನಿಕರ ಕಾಲಿಗೆ ಬಿದ್ದು, ವ್ಯಾಪಾರಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆ.11ರಂದು ಈ ಸಂಬಂಧಿಸಿದಂತೆ ಬೃಹತ್ ಪ್ರತಿಭಟನೆ ನಡೆಯಲಿರುವ ಹಿನ್ನೆಲೆ, ಪ್ರತಿಭಟನೆಗೆ ನೀವು ಸಹಕರಿಸಿ ಎಂದು ನಿಂಗಜ್ಜ ನಾಯಕ ಕಣ್ಣೀರು ಸುರಿಸುತ್ತ ಜನರಿಗೆ ಕಾಲಿಗೆ ಬಿದ್ದು ಮನವಿ ಮಾಡಿಕೊಂಡಿದ್ದಾರೆ.
ಸದ್ಯ, ಗವಿಸಿದ್ದಪ್ಪ ನಾಯಕನ ಕೊಲೆ ಪ್ರಕರಣ ಸಿಬಿಐಗೆ ವಹಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದೀಗ ವಾಲ್ಮೀಕಿ ಮಹಸಭಾ ನೇತೃತ್ವದಲ್ಲಿ ಕೊಪ್ಪಳದಲ್ಲಿ ಆ.11 ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಪಕ್ಷಾತೀತವಾಗಿ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.



















