ಧಾರವಾಡ: ಜಮೀರ್ ಯಾನೆ ಜಮ್ಮು ಎಂಬ ಪುಡಿ ರೌಡಿ ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲೀಗ ವೈರಲ್ ಆಗಿದೆ.
ಹುಬ್ಬಳ್ಳಿ ನಗರದ ಪುಡಿ ರೌಡಿ ಜಮೀರ್ ಯಾನೆ ಜಮ್ಮು ಯುವಕನೊಬ್ಬನ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ.
ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಇದ್ದುಕೊಂಡು ವಿಡಿಯೋ ಕಾಲ್ ಮಾಡಿರುವುದನ್ನು ಅವನ ಬೆಂಬಲಿಗರು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ದುಡ್ಡು ಕೊಟ್ಟರೆ ಮೊಬೈಲ್ ಫೋನ್ ಸಿಗುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.