ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಸಿಲಿಕಾನ್ ಸಿಟಿಯ ಲಾಲ್ ಬಾಗ್ ನಲ್ಲಿ ಫಲಪುಷ್ಟಗಳ ವೈಭವ ಸೃಷ್ಟಿಯಾಗಿದೆ.
ಸಸ್ಯಕಾಶಿಯಲ್ಲಿ ಪುಷ್ಪಲೋಕವೇ ಧರೆಗಿಳಿಯುತ್ತಿದ್ದು, ಇಂದಿನಿಂದ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಆರಂಭಗೊಳ್ಳಲಿದೆ. ಈ ಫಲಪುಷ್ಪ ಪ್ರದರ್ಶನ 12 ದಿನಗಳ ಕಾಲ ನಡೆಯಲಿದೆ. ವೀರವನಿತೆ ಕಿತ್ತೂರು ರಾಣಿ, ಸಂಗೋಳ್ಳಿ ರಾಯಣ್ಣ ಅವರ ಕಿತ್ತೂರಿನ ವೀರ ಪರಂಪರೆಯನ್ನೇ ಲಾಲ್ ಬಾಗ್ ನಲ್ಲಿ ಅನಾವರಣಗೊಳಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10 ಕ್ಕೆ ಗಾಜಿನ ಮನೆಯಲ್ಲಿ ಫ್ಲವರ್ ಶೋಗೆ ಚಾಲನೆ ನೀಡಲಿದ್ದಾರೆ. 12 ದಿನಗಳ ಪ್ರದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ.
ಕಿತ್ತೂರು ಸಂಸ್ಥಾನದ ಕೋಟೆಯ ಪ್ರಾತಿನಿಧಿಕ ಪುಷ್ಪ ಮಾದರಿ, ರಾಣಿ ಚೆನ್ನಮ್ಮ ಮತ್ತು ರಾಯಣ್ಣನ ಪ್ರತಿಮೆಗಳು, ಕೋಟೆ ವಿನ್ಯಾಸದ ವರ್ಟಿಕಲ್ ಗಾರ್ಡನ್, ರಾಯಣ್ಣ ಹುತಾತ್ಮರಾಗುವ ಸನ್ನಿವೇಶದ ಪ್ರದರ್ಶನ, ಹೂ ಜೋಡಣೆ ನಡುವೆ ವೀರವನಿತೆಯರ ಕಲಾಕೃತಿಗಳು ಎಲ್ಲರನ್ನೂ ಕೈ ಬೀಸಿ ಕರೆಯಲಿವೆ. 109 ಪ್ರಬೇಧದ 30 ಲಕ್ಷಕ್ಕೂ ಹೆಚ್ಚು ಹೂಗಳನ್ನು ಬಳಸಲಾಗುತ್ತಿದೆ.


















