ಬೆಂಗಳೂರು ನಗರದಲ್ಲಿರುವ ಎರಡೂವರೆ ಲಕ್ಷ ಬೀದಿ ನಾಯಿಗಳ ಪೈಕಿ ನಿತ್ಯ 5 ಸಾವಿರ ನಾಯಿಗಳಿಗೆ ಬಾಡೂಟ ಒದಗಿಸಲು ಟೆಂಡರ್ ಆಹ್ವಾನಿಸಲಾಗಿದ್ದು, ಇಬ್ಬರು ಗುತ್ತಿಗೆದಾರರು ಭಾಗಿಯಾಗಿದ್ದಾರೆ.
ಸುದರ್ಶನ್ ಹಾಗೂ ಆರುಣ್ ಕುಮಾರ್ ಎಂಬ ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗಿಯಾಗಿದ್ದಾರೆ. ವ್ಯಾಪಕ ವಿರೋಧದ ನಡುವೆ ಟೆಂಡರ್ ಅಹ್ವಾನಿಸಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಎನ್ ಜಿಓಗಳಿಂದಾಗಿ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ ಎಂದು ತೆರಿಗೆದಾರರು ಆರೋಪಿಸಿದ್ದಾರೆ. ಸದ್ಯ ಟೆಂಡರ್ ನಲ್ಲಿ ಭಾಗಿ ಅಗಿರುವ ಗುತ್ತಿಗೆದಾರರು ಕೂಡ ಎನ್ ಜಿಓ ಪೋಷಣೆ ಮಾಡುತ್ತಿರುವವರು. ಇದರಿಂದಾಗಿ ತೆರಿಗೆ ಹಣ ಪೋಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.