ಕೊಪ್ಪಳ: ಗವಿಸಿದ್ದಪ್ಪ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿದ್ದಾರೆ.
ಕೊಲೆಯಾದ ಗವಿಸಿದ್ದಪ್ಪ ಅವರ ಮನೆಗೆ ಭೇಟಿ ನೀಡಿದ ಸಚಿವ ಶಿವರಾಜ ತಂಗಡಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆಯಬಾರದು. ಸರ್ಕಾರದಿಂದ ಅವರಿಗೆ ಏನು ಪರಿಹಾರ ಸಿಗಬೇಕೊ? ಅದನ್ನು ನೀಡಲಾಗುತ್ತದೆ. ಈಗ ಪ್ರಕರಣ ತನಿಖೆಯ ಹಂತದಲ್ಲಿದೆ. ಈಗ ಎಲ್ಲವನ್ನು ಹೇಳುವುದಕ್ಕೆ ಆಗುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ಎಸ್ಪಿಯವರು ತನಿಖೆಯ ಹಂತದಲ್ಲಿದ್ದಾಗ ಗವಿಸಿದ್ದಪ್ಪ ಕಿರುಕುಳ ನೀಡುತ್ತಿದ್ದ ಎಂದು ಹೇಳಬಾರದಿತ್ತು. ಆ ಕುಟುಂಬ ನೋವಿನಲ್ಲಿದೆ. ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ ಆದರೆ ನೊಂದ ಕುಟುಂಬದೊಂದಿಗೆ ನಾವು ಇರೋಣ. ಇಲ್ಲಿ ರಾಜಕಾರಣ ಬೇಡ ಎಂದು ಸಚಿವರು ಹೇಳಿದ್ದಾರೆ.