ಬೆಂಗಳೂರು : ಸುಪ್ರೀಂ ಕೋರ್ಟ್ ನಲ್ಲಿ ಇಂದು(ಸೋಮವಾರ) ಬಿಬಿಎಂಪಿ ಚುನಾವಣೆ ಭವಿಷ್ಯ ನಿರ್ಧಾರವಾಗಲಿದೆ.
ಸುಪ್ರೀಂ ಕೋರ್ಟ್, ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಜುಲೈ 28 ರಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದೆ. ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಜು. 28ರಂದು ನಡೆದಿದ್ದ ವಿಚಾರಣೆ ವೇಳೆ ನವೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ವಾದ ಮಂಡಿಸಿದ್ದು, ಈ ಕುರಿತಂತೆ ಆದೇಶ ನೀಡುವಂತೆ ಮನವಿ ಮಾಡಿದ್ದರು.
ಸರ್ಕಾರದ ಪರ ವಕೀಲ ಫಣೀಂದ್ರ, ನವೆಂಬರ್ ವೇಳೆಗೆ ಚುನಾವಣೆ ಸಾಧ್ಯವಿಲ್ಲ ಎಂದಿದ್ದರು. ಸುಪ್ರೀಂ ಕೋರ್ಟ್ ಆಗಸ್ಟ್ 4 ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಸೂಚನೆ ನೀಡಿತ್ತು, ಅದರಂತೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ಬಿಬಿಎಂಪಿ ಚುನಾವಣೆ ಅರ್ಜಿ ವಿಚಾರಣೆ ನಡೆಯಲಿದೆ. ಈಗಾಗಲೇ ನಗರಾಭಿವೃದ್ಧಿ ಇಲಾಖೆ ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದೆ.
ಸರ್ಕಾರ 25 ವಾರ್ಡ್ ಗಳಿಗೆ ಚುನಾವಣೆ ನಡೆಸಲು ಸಿದ್ದವಿದ್ದೇವೆ ಎಂದಿದೆ. ಡಿಸೆಂಬರ್ 2020ರಂದು ಆರು ವಾರದೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ರಾಜ್ಯಕ್ಕೆ ಸೂಚಿಸಿತ್ತು. ಕೆಎಂಸಿ ಕಾಯ್ದೆ ಅನ್ವಯ ಚುನಾವಣೆ ನಡೆಸುವಂತೆ ತಾಕೀತು ಮಾಡಿದ್ದ ಹೈಕೋರ್ಟ್ ಈ ಆದೇಶ ಪ್ರಶ್ನಿಸಿ ಮಾಜಿ ಕಾರ್ಪೋರೇಟರ್ ಶಿವರಾಜು ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದರು. ಸದ್ಯ, ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ದವಿದೆ ಎಂದು 30 ಪುಟಗಳ ಅಫಿಡವಿಟ್‌ನಲ್ಲಿ ಹೇಳಿದೆ.
“ಪ್ರಮಾಣ ಪತ್ರದಲ್ಲಿ ಏನಿದೆ?”
-2024ಕ್ಕೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿ ಮಾಡಲಾಗಿದೆ.
-ಬೆಂಗಳೂರಿನ ವ್ಯಾಪ್ತಿ ವಿಸ್ತರಣೆಯಾಗಿದೆ.
-ಪುರಸಭೆಗಳ ಪುನರಚನೆ ಮಾಡಲಾಗಿದೆ.
-ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಬೇಕಿದೆ.
-ಸದ್ಯ ಬೆಂಗಳೂರಿನಲ್ಲಿ 144 ಲಕ್ಷ ಜನಸಂಖ್ಯೆ ಇದೆ.
-ಹೊಸ ಭೂ-ಆರ್ಥಿಕ ಯೋಜನೆಗಳ ನಿರ್ವಹಣೆ ಮಾಡಬೇಕಿದೆ.
-2011 ರಲ್ಲಿ ಬೆಂಗಳೂರಿನ ಜನಸಂಖ್ಯೆ 84 ಲಕ್ಷ ಇತ್ತು.
-13 ವರ್ಷದಲ್ಲಿ ಬೆಂಗಳೂರಿನ ಜನಸಂಖ್ಯೆ 60 ಲಕ್ಷ ಹೆಚ್ಚಾಗಿದೆ.
-ಜನಸಂಖ್ಯೆ ಹೆಚ್ಚಾಗಿದ್ದರಿಂದ ಆಡಳಿತ ಮರುಸಂರಚನೆ ಮಾಡಬೇಕಿದೆ.
ʼಬಿಬಿಎಂಪಿ ಐದು ಪಾಲಿಕೆಗಳು ಯಾವುವು?”
-ಬೆಂಗಳೂರು ಪಶ್ಚಿಮ ನಗರ ಪಾಲಿಕೆ
-ಬೆಂಗಳೂರು ದಕ್ಷಿಣ ನಗರ ಪಾಲಿಕೆ
-ಬೆಂಗಳೂರು ಕೇಂದ್ರ ನಗರ ಪಾಲಿಕೆ
-ಬೆಂಗಳೂರು ಪೂರ್ವ ನಗರ ಪಾಲಿಕೆ
-ಬೆಂಗಳೂರು ಉತ್ತರ ನಗರ ಪಾಲಿಕೆ
ಯಾವ್ಯಾವ ಪಾಲಿಕೆಗೆ ಯಾವ್ಯಾವ ವಿಧಾಸನಭಾ ಕ್ಷೇತ್ರ?
“ಬೆಂಗಳೂರು ಕೇಂದ್ರ ನಗರ ಪಾಲಿಕೆ”
ವಿಧಾನಸಭಾ ಕ್ಷೇತ್ರಗಳು – ಸಿ.ವಿ.ರಾಮನ್ ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿ ನಗರ, ಶಾಂತಿ ನಗರ, ಶಿವಾಜಿ ನಗರ
“ಬೆಂಗಳೂರು ಪೂರ್ವ ನಗರ ಪಾಲಿಕೆ”
ವಿಧಾನಸಭಾ ಕ್ಷೇತ್ರಗಳು – ಕೆ.ಆರ್.ಪುರ, ಮಹದೇವಪುರ
“ಬೆಂಗಳೂರು ಉತ್ತರ ನಗರ ಪಾಲಿಕೆ”
ವಿಧಾನಸಭಾ ಕ್ಷೇತ್ರಗಳು- ಬ್ಯಾಟರಾಯನಪುರ, ದಾಸರಹಳ್ಳಿ, ಹೆಬ್ಬಾಳ, ಪುಲಿಕೇಶಿ ನಗರ, ರಾಜ ರಾಜೇಶ್ವರಿ ನಗರ, ಸರ್ವಜ್ಞ ನಗರ, ಯಲಹಂಕ
“ಬೆಂಗಳೂರು ದಕ್ಷಿಣ ನಗರ ಪಾಲಿಕೆ”
ವಿಧಾನಸಭಾ ಕ್ಷೇತ್ರಗಳು – ಬಿಟಿಎಂ ಲೇಔಟ್, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಮಹದೇವಪುರ, ಪದ್ಮನಾಭ ನಗರ, ರಾಜರಾಜೇಶ್ವರಿ ನಗರ, ಯಶವಂತಪುರ
“ಬೆಂಗಳೂರು ಪಶ್ಚಿಮ ನಗರ ಪಾಲಿಕೆ”
ವಿಧಾನಸಭಾ ಕ್ಷೇತ್ರಗಳು – ಬಸವನಗುಡಿ, ದಾಸರಹಳ್ಳಿ, ಗೋವಿಂದರಾಜ ನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಪದ್ಮನಾಭ ನಗರ, ರಾಜಾಜಿನಗರ, ರಾಜ ರಾಜೇಶ್ವರಿ ನಗರ, ವಿಜಯನಗರ, ಯಶವಂತಪುರ.