ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಸಂಸ್ಥೆಯಲ್ಲಿ ಖಾಲಿ ಇರುವ 96 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 96 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಿಗೆ ಸಂದರ್ಶನ ಯಾವಾಗ ನಡೆಯುತ್ತದೆ? ಯಾವ ವಿದ್ಯಾರ್ಹತೆ ಇರಬೇಕು ಎಂಬುದರ ಮಾಹಿತಿ ಇಲ್ಲಿದೆ.
ಕೇರಳದ ಪಾಲಕ್ಕಾಡ್, ಕರ್ನಾಟಕದ ಕೋಲಾರ, ಮೈಸೂರು, ಬೆಂಗಳೂರು, ನವದೆಹಲಿ, ಪುಣೆ ಮತ್ತು ಹೈದರಾಬಾದ್ ಸೇರಿ ಹಲವು ಘಟಕಗಳಲ್ಲಿ ನೇಮಕಾತಿ ನಡೆಯಲಿದೆ. ಹುದ್ದೆಗಳಿಗೆ B.E./B.Tech ಪದವೀಧರರು ಅರ್ಹರಾಗಿದ್ದಾರೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ : ಭಾರತ ಎರ್ಥ್ ಮೂವರ್ಸ್ ಲಿಮಿಟೆಡ್ (BEML)
ಹುದ್ದೆ ಹೆಸರು : ಜೂನಿಯರ್ ಎಕ್ಸಿಕ್ಯೂಟಿವ್
ಒಟ್ಟು ಹುದ್ದೆಗಳ ಸಂಖ್ಯೆ : 96
ನೇಮಕಾತಿ ವಿಧಾನ: ವಾಕ್-ಇನ್ ಸಂದರ್ಶನ
ಉದ್ಯೋಗ ಸ್ಥಳ: ಪಾಲಕ್ಕಾಡ್ (ಕೇರಳ), ಕೋಲಾರ, ಮೈಸೂರು, ಬೆಂಗಳೂರು (ಕರ್ನಾಟಕ), ನವದೆಹಲಿ, ಪುಣೆ (ಮಹಾರಾಷ್ಟ್ರ), ಹೈದರಾಬಾದ್ (ತೆಲಂಗಾಣ)
ಗರಿಷ್ಠ 29 ವರ್ಷದೊಳಗಿನವರು ಸಂದರ್ಶನ ಕ್ಕೆ ಹಾಜರಾಗಬಹುದು. ನೇಮಕಾತಿ ಹೊಂದಿದವರಿಗೆ 35 ಸಾವಿರ ರೂಪಾಯಿಯಿಂದ 43 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು https://bemlindia.in ವೆಬ್ ಸೈಟ್ ಗೆ ಭೇಟಿ ನೀಡಬಹುದು. ಆಗಸ್ಟ್ 11 ಹಾಗೂ 12ರಂದು ಸಂದರ್ಶನ ನಡೆಯಲಿದೆ. ಸಂದರ್ಶನದ ಹೆಚ್ಚಿನ ವಿವರ ಕೆಳಗಿನಂತಿದೆ.
ಸಂದರ್ಶನ ನಡೆಯುವುದು ಎಲ್ಲಿ?
ಕೋಲಾರ (ಕರ್ನಾಟಕ):
H&P Unit, BEML KGF Complex, BEML Nagar, Kolar Gold Fields – 563115
ಮೈಸೂರು, ಬೆಂಗಳೂರು, ನವದೆಹಲಿ, ಪುಣೆ, ಹೈದರಾಬಾದ್:
BEML Mysore Complex, Belavadi Post, Mysuru – 570018



















