ನವ ದೆಹಲಿ : ತೈಲ ಕಂಪೆನಿಗಳು 19ಕೆ.ಜಿ ತೂಕದ ವಾಣಿಜ್ಯ ಬಳಕೆ ಎಲ್.ಪಿ.ಜಿ ಸಿಲಿಂಡರ್ ಗಳ ದರವನ್ನು 33.50 ರೂ. ಇಳಿಕೆ ಮಾಡಿದ್ದು, ಇದೀಗ ಆಗಸ್ಟ್ 01 ರಿMದ ದೆಹಲಿಯಲ್ಲಿ ೧೯ ಕೆ.ಜಿ ತೂಕದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ದರ 1631.50 ರೂ.ಗೆ ಇಳಿಕೆಯಾಗಿದೆ.
ಆದರೇ, 14.2 ಕೆ.ಜಿ ತೂಕದ ಗೃಹ ಉಪಯೋಗಿ ಅಡುಗೆ ಅನಿಲ ಸಿಲಿಂಡರ್ ಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.



















