ಬೆಂಗಳೂರು: ರಾಜ್ಯ ಸರ್ಕಾರದ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರು, ಅದರಲ್ಲೂ ರಾಯಚೂರಿನಲ್ಲಿ ಉದ್ಯೋಗ ಪಡೆಯಬೇಕು ಎಂದು ಕಾಯುತ್ತಿರುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಯಚೂರಿನಲ್ಲಿರುವ ನಿರ್ಮಿತಿ ಕೇಂದ್ರದಲ್ಲಿ ಒಂದು ಅಕೌಂಟೆಂಟ್ ಹುದ್ದೆ ಖಾಲಿ ಇದ್ದು, ನೇಮಕಾತಿಗಾಗಿ ಅರ್ಜಿಗಳನ್ನು (Nirmithi Kendra Raichur Recruitment 2025) ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನವಾಗಿರುವ ಕಾರಣ ಕೂಡಲೇ ಅರ್ಜಿ ಸಲ್ಲಿಸಬೇಕಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ನಿರ್ಮಿತಿ ಕೇಂದ್ರ, ರಾಯಚೂರು
ಹುದ್ದೆಗಳ ಹೆಸರು: ಅಕೌಂಟೆಂಟ್
ಒಟ್ಟು ಹುದ್ದೆಗಳು: 01
ಅರ್ಜಿ ಸಲ್ಲಿಕೆ ವಿಧಾನ: ಆಫ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 05
ಎಂ.ಕಾಂ ಹಾಗೂ ಎಂಬಿಎ ಕೋರ್ಸ್ ಗಳನ್ನು ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿಯನ್ನು 45 ವರ್ಷ ಎಂದು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ raichur.nic.in ವೆಬ್ ಸೈಟ್ ಗೆ ತೆರಳಿ ಅಧಿಸೂಚನೆ ಓದಬೇಕು. ಬಳಿಕ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು, ಅದನ್ನು ಭರ್ತಿ ಮಾಡಿ, ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ
Nirmithi Kendra, Raichur, Sy.No.809(A), Bolmandoddi Road, Raichur – 584103, Karnataka
ಜಿಲ್ಲೆಗಳಲ್ಲಿ ಸ್ಥಾಪಿಸಲಾದ ನಿರ್ಮಿತಿ ಕೇಂದ್ರಗಳು ಮತ್ತು ಸಂಬಂಧಿತ ಅಥವಾ ಸಂಯೋಜಿತ ಏಜೆನ್ಸಿಗಳ ಚಟುವಟಿಕೆಗಳ ಸಮನ್ವಯ, ಮೇಲ್ವಿಚಾರಣೆ ಮತ್ತು ನಿಯಂತ್ರಣ. ಕಾಲಕಾಲಕ್ಕೆ ಉದಯೋನ್ಮುಖ ವಸತಿ ಪರಿಕಲ್ಪನೆಗಳು ಮತ್ತು ನೀತಿ ಆಯ್ಕೆಗಳ ಕುರಿತು ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತವೆ.