ಧರ್ಮಸ್ಥಳ : ನೇತ್ರಾವತಿ ಸ್ನಾನಘಟ್ಟ ಸ್ಥಳದಲ್ಲಿ ಅನಾಮಿಕನೊಬ್ಬ ಗುರುತಿಸಿದ 6ನೇ ಸ್ಥಳ ಅಗೆಯುವ ಕಾರ್ಯಾಚರಣೆ ಮುಂದುವರಿದಿದ್ದು, ಸಾಕ್ಷಿ ದೂರುದಾರ ಗುರುತಿಸಿದ ಆರನೇ ಸ್ಥಳದಲ್ಲಿ ಮಾನವ ಅಸ್ಥಿಪಂಜರದ ಅವಶೇಷ ಪತ್ತೆಯಾಗಿದೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಉತ್ಖನನ ಕಾರ್ಯ ಮುಂದುವರಿಸಿದ್ದು, ಆರನೇ ಸ್ಥಳದಲ್ಲಿ ಈಗ ಮಾನವ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿದೆ. ಅದನ್ನು ತನಿಖಾ ತಂಡ ಈಗ ಸಂಗ್ರಹಿಸಿಕೊಂಡಿದೆ. 6ನೇ ಸ್ಥಳದಲ್ಲಿ ಮಿನಿ ಹಿಟಾಚಿ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ಇನ್ನೂ ಆಳಕ್ಕೆ ಅಗೆಯುವ ಕಾರ್ಯ ಮಾಡಲಾಗುತ್ತಿದೆ. ಅಷ್ಟಲ್ಲದೇ, ಸಾಕ್ಷಿ ದೂರುದಾರನ ಬೇಡಿಕೆಯಂತೆ ಅಲ್ಲಿನ ಸುತ್ತಮುತ್ತ ಪ್ರದೇಶಗಳ ಪರಿಶೀಲನೆಯನ್ನು ಕೂಡ ಎಸ್.ಐ.ಟಿ ತಂಡ ನಡೆಸುತ್ತಿದೆ.
ಸಂಗ್ರಹಿಸಿದ ಮಾನವ ಅಸ್ಥಿ ಪಂಜರದ ಅವಶೇಷಗಳನ್ನು ರಕ್ಷಿಸುವ ಪ್ರಕ್ರಿಯೆ ಮಾಡಲಾಗಿದೆ. ಸಹಾಯಕ ಆಯುಕ್ತರ ಮುಖೇನ ಎಸ್.ಐ.ಟಿ ಪತ್ತೆಯಾದ ಅಸ್ಥಿ ಪಂಜರದ ಅವಶೇಷದ ಸಂಗ್ರಹ ಮತ್ತು ಫಾರೆನ್ಸಿಕ್ ಸೈನ್ಸ್ ಲ್ಯಾಬ್ ಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಮಾಡಲಿದೆ ಎಂದು ಮೂಲಗಳು ಕರ್ನಾಟಕ ನ್ಯೂಸ್ ಬೀಟ್ ಗೆ ತಿಳಿಸಿವೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.



















