ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT) ಮುಖ್ಯಸ್ಥ ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷ ಸುಳಿವು ಕೊಟ್ಟಿದ್ದಾರೆ.
ಕೇಂದ್ರ ಸೇವೆಗೆ ತೆರಳುವ ಪಟ್ಟಿಯಲ್ಲಿ ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣಬ್ ಮೊಹಂತಿ ಅವರ ಹೆಸರಿದೆ. ಈ ಹಿನ್ನೆಲೆ ಎಸ್‌ಐಟಿ ಮುಖ್ಯಸ್ಥರ ಬದಲಾವಣೆ ಆಗುತ್ತದೆಯೇ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಮೊಹಂತಿ ಅವರು ಕೇಂದ್ರ ಸೇವೆಗೆ ಹೋದರೆ ಎಸ್.ಐ.ಟಿ ಮುಖ್ಯಸ್ಥರ ಬದಲಾವಣೆ ಆಗುತ್ತದೆ ಎಂದಿದ್ದಾರೆ.
ಇನ್ನೂ, ಧರ್ಮಸ್ಥಳದಲ್ಲಿ ಉತ್ಖನನ ಪ್ರಕ್ರಿಯೆ ಮುಂದುವರೆದಿದ್ದು, ಇಂದು ಕೂಡ ಉತ್ಖನನದ ಸ್ಥಳಕ್ಕೆ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿಯವರು ಭೇಟಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಮಾತ್ರವಲ್ಲದೇ, ಎಸ್‌ಐಟಿ ಕರ್ನಾಟಕದ ಪ್ರತಿ ಪೊಲೀಸ್ ಠಾಣೆಯಿಂದ ಮಾಹಿತಿ ಕೇಳಿದ್ದು, 1995ರಿಂದ 2005 ಹಾಗೂ 2005ರಿಂದ 2015ವರೆಗೆ ಪತ್ತೆಯಾಗದ ನಾಪತ್ತೆ, ಕೊಲೆ-ಅತ್ಯಾಚಾರ ಪ್ರಕರಣದ ಮಾಹಿತಿ ಒದಗಿಸಲು ತಿಳಿಸಿದೆ.
10 ವರ್ಷಗಳಂತೆ ಎರಡು ಪಟ್ಟಿಯಲ್ಲಿ ಒಟ್ಟು 20 ವರ್ಷದ ದಾಖಲೆ ನೀಡಲು ಎಸ್‌ಐಟಿ ಅಧಿಕಾರಿಗಳು ಪತ್ರದ ಮೂಲಕ ತಿಳಿಸಿದ್ದಾರೆ.


















