ಬೀದರ್ : ಬೀದರ್ ಜಿಲ್ಲೆಯಲ್ಲಿ ಮೊಟ್ಟೆ ಪೂರೈಕೆದಾರರ ಕಳ್ಳಾಟಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬ್ರೇಕ್ ಹಾಕಿದ್ದಾರೆ.
ಏಜೆನ್ಸಿ ಬದಲು ಆಗಸ್ಟ್ 1 ರಿಂದ ಬಾಲ ವಿಕಾಸ ಸಮಿತಿಯಿಂದಲೇ ಅಂಗನವಾಡಿಗಳಿಗೆ ಮೊಟ್ಟೆ ಪೂರೈಸಬೇಕು. ಕಳಪೆ ಗುಣಮಟ್ಟ, ಪ್ರತಿ ತಿಂಗಳು ಸರಿಯಾಗಿ ಮೊಟ್ಟೆ ಪೂರೈಸದ ಹಿನ್ನೆಲೆ ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್ಕಾಗಿ ಸೂಚಿಸಿದ್ದರು. ಆದರೆ, ಇಲಾಖೆಯ ಸಿಡಿಪಿಗಳು ಸಚಿವೆ ಆದೇಶವನ್ನು ಪಾಲಿಸಿಲ್ಲ.
ಬೀದರ್ ಸಿಡಿಪಿಒ ಹೊರತುಪಡಿಸಿ ಇನ್ನುಳಿದ 4 ತಾಲ್ಲೂಕುಗಳ ಸಿಡಿಪಿಒಗಳು ಸಚಿವರ ಆದೇಶ ಪಾಲಿಸಲು ಮೀನಾಮೇಷ ಎಣಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಸಚಿವೆ ಹೆಬ್ಬಾಳ್ಕರ್ ಸೂಚನೆ ನೀಡಿ 26 ದಿನ ಕಳೆದರೂ ಡಿಡಿ & ಸಿಡಿಪಿಒಗಳು ಆದೇಶವನ್ನು ಹೊರಡಿಸಿಲ್ಲ. ಮೊಟ್ಟೆ ಪೂರೈಕೆದಾರರ & ರಾಜಕಾರಣಿಗಳ ಒತ್ತಡ, ಕಮಿಷನ್ ಆಸೆಗೆ ಸಚಿವೆ ಮಾತಿಗೆ ಅಧಿಕಾರಿಗಳು ಕಿಮ್ಮತ್ತು ಕೊಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಇಲಾಖೆಯ ಉಪ ನಿರ್ದೇಶಕ ಶ್ರೀಧರ್ ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದು ನನ್ನ ವ್ಯಾಪ್ತಿಗೆ ಬರಲ್ಲ, ತಾ.ಪಂ & ಸಿಡಿಪಿಒಗಳ ವ್ಯಾಪ್ತಿಗೆ ಬರುತ್ತದೆ ಎಂದು ಸಚಿವೆ ಆದೇಶವಿದ್ದರೂ ಸಹ ಪಾಲಿಸಿಲ್ಲ. ಅಧಿಕಾರಿಗಳ ಈ ನಡೆ ಹಿಂದೆ ಕಮಿಷನ್ ಆಸೆ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.