ಬೆಂಗಳೂರು : ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಎಸ್ಐಟಿ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡು ತನಿಖೆ ಮಾಡುತ್ತಿದ್ದಾರೆ.
ತನಿಖೆಯಲ್ಲಿ ನಾವು ಯಾರು ಮಧ್ಯಪ್ರವೇಶ ಮಾಡಲ್ಲವೆಂದು ತಿಳಿಸಿದ್ದಾರೆ. ಸದ್ಯ, ತನಿಖೆಗೆ ವೇಗೆ ಹೆಚ್ಚಿಸಿರುವ ಎಸ್‌ಐಟಿ ತಂಡ, ನಿನ್ನೆ ಧರ್ಮಸ್ಥಳದ ನೇತ್ರಾವತಿ ತಟಕ್ಕೆ ಅನಾಮಿಕನನ್ನು ಕರೆದೊಯ್ದು ಸ್ಥಳ ಮಹಜರು ಮಾಡಿದೆ.
ಸತತ ಮೂರ್ನಾಲ್ಕು ಗಂಟೆಗೂ ಹೆಚ್ಚು ಕಾಲ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಿಗೂಢ ವ್ಯಕ್ತಿಯನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಿರುವ ಎಸ್ ಐಟಿ, 20 ವರ್ಷಗಳ ಹಿಂದಿನ ಶವ ಹೂತಿಟ್ಟ ಪ್ರಕರಣಗಳು, ಮಹಿಳೆಯರು, ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣವನ್ನು ಭೇದಿಸಲು ಎಸ್.ಐ.ಟಿ ತಂಡ ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದ್ದಾರೆ.

















