ಬೆಂಗಳೂರು : ಬೆಂಗಳೂರು ಸಂಚಾರ ವಿಭಾಗದ ಪೊಲೀಸರಿಂದ ಕುಡಿದು ವಾಹನ ಚಲಾಯಿಸುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.
ಒಂದು ವಾರದಲ್ಲಿ 52,994 ವಾಹನಗಳ ತಪಾಸಣೆ ಮಾಡಲಾಗಿತ್ತು. ಈ ವೇಳೆ ಡ್ರಿಂಕ್ & ಡ್ರೈವ್ ಮಾಡುತ್ತಿದ್ದ 803 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅತಿವೇಗ ವಾಹನ ಚಾಲನೆ ಸಂಬಂಧ 94 ಪ್ರಕರಣಗಳಿಗೆ 10 ಲಕ್ಷ ದಂಡ ಸಂಗ್ರಹ ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.
ಅನಧಿಕೃತ ವಾಹನ ನಿಲುಗಡೆ ವಿರುದ್ಧ ಬೆಂಗಳೂರು ಪೊಲೀಸರ ಕ್ರಮ ತೆಗೆದುಕೊಂಡು, ಕಳೆದ ಒಂದು ವಾರದಲ್ಲಿ 7721 ಪ್ರಕರಣಗಳು ದಾಖಲಾಗಿದ್ದು, ಒಟ್ಟು 38,85,000 ರೂ. ದಂಡ ಸಂಗ್ರಹಣೆ ಮಾಡಲಾಗಿದೆ.


















