ಧಾರವಾಡ : ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಎಸ್ ಐಟಿ ತನಿಖೆಗೆ ನೀಡಿದ ಬೆನ್ನಲ್ಲೇ ಧಾರವಾಡದಲ್ಲಿ ಭಕ್ತರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಭಕ್ತೆ ಸವಿತಾ ಅಮರಶೆಟ್ಟಿ ಮಾತನಾಡಿ, ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಬಾರದು. ಅದೊಂದು ಪವಿತ್ರ ಧಾರ್ಮಿಕ ಕೇಂದ್ರವಾಗಿದೆ. ಅಲ್ಲಿ ನಡೆದಿರುವ ಅಸಹಜ ಸಾವಿನ ಬಗ್ಗೆ ಕೇಳಿದ್ದೇವೆ. ಆ ಕುರಿತು ಎಸ್ ಐಟಿ ತನಿಖೆ ನಡೆಸುತ್ತದೆ ಎಂದಿದ್ದಾರೆ.
ಕಾನೂನಿಗೆ ಎಲ್ಲರೂ ಗೌರವಕೊಡಬೇಕು ಹಾಗೂ ತಲೆಬಾಗಬೇಕು. ತನಿಖೆ ವರದಿ ಬರೋವರೆಗೆ ಧರ್ಮಸ್ಥಳದ ವಿರುದ್ಧ ಮಾತನಾಡುವುದು ನಿಲ್ಲಬೇಕು ಎಂದಿದ್ದಾರೆ. ಧರ್ಮಸ್ಥಳ ಕ್ಷೇತ್ರದಿಂದ ಸಾಕಷ್ಟು ಸಾಮಾಜಿಕ ಕೆಲಸ ಮಾಡಿದ್ದಾರೆ. ಅಪಪ್ರಚಾರದಿಂದ ಭಕ್ತರಿಗೆ ನೋವುಂಟಾಗಿದೆ. ಅದು ಹಿಂದೂ ಧರ್ಮದ ಜಾಗೃತ ಸ್ಥಳ. ಹೀಗಾಗಿ ಅದರ ವಿರುಧ್ಧ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.