ಸಿಲಿಕಾನ್ ಸಿಟಿ ಜನರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ನೀಡಿದ್ದು, ಆಗಸ್ಟ್ ನಲ್ಲೇ ಯೆಲ್ಲೋ ಲೈನ್ ಉದ್ಘಾಟನೆಯಾಗುವ ಸಾಧ್ಯತೆಯಿದೆ.
ಲಕ್ಷಾಂತರ ಜನ ಐಟಿ-ಬಿಟಿ ಉದ್ಯೋಗಿಗಳ ಕನಸಿನ ಯೋಜನೆಯಾದ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡದಿಂದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮೆಟ್ರೋ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಜು.25ರವರೆಗೂ ಪರಿಶೀಲನೆ ನಡೆಯಲಿದ್ದು, ಆಗಸ್ಟ್ ನಲ್ಲೇ ಯೆಲ್ಲೋ ಲೈನ್ ಉದ್ಘಾಟನೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.



















