ಹೊಸಕೋಟೆ : ಹೊಸಕೋಟೆಯ ಫೇಮಸ್ ಮಟನ್ ಬಿರಿಯಾನಿ ಹೋಟೆಲ್ ಮಾಲೀಕನಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಟನ್ ಬಿರಿಯಾನಿ ತಿನ್ನಲು ದೂರದ ಊರಿಂದ ಯುವಕರು ಲಾಂಗ್ ಡ್ರೈವ್, ಜಾಲಿ ರೈಡ್ ಹೆಸರಲ್ಲಿ ಅತಿವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಬರುತ್ತಾರೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನಲೆ ಪೋಲೀಸರು ಮಾಲೀಕನಿಗೆ ಸಮಯ ಬದಲಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಇದುವರೆಗೆ ಮುಂಜಾನೆ ೪ ಗಂಟೆಗೆ ಪ್ರಾರಂಭಿಸುತ್ತಿದ್ದ ಹೋಟೆಲ್ ಅನ್ನು ಇನ್ಮುಂದೆ ೬ ಗಂಟೆಗೆ ಪ್ರಾರಂಭಿಸುವಂತೆ ಪೊಲೀಸರು ಸೂಚಿಸಿದ್ದಾರೆ.


















