ಕುಂದಾಪುರ: ಕರಾವಳಿ ಭಾಗದ ಕಾಮಿಡಿ ರೀಲ್ಸ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಸಾದ್ ಜೋಗಿ ಅವರ ಮನೆಗೆ ಭಾರಿ ಮಳೆ ಪರಿಣಾಮವಾಗಿ ಹಾನಿಯಾಗಿದೆ.
ಕುಂದಾಪುರದ ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲು ನಿವಾಸಿ ರಾಘವೇಂದ್ರ ಜೋಗಿ avr ಮನೆ ಹಾನಿಯಾಗಿದೆ. ಮನೆಯು ಸಂಪೂರ್ಣ ಕುಸಿಯುವ ಹಂತದಲ್ಲಿದ್ದು, ಬಹಳಷ್ಟು ಹಾನಿಯಾಗಿ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮನೆಯ ಹಿಂದಿನ ಗೋಡೆ ಒಳ ಛಾವಣಿಯ ಮಾಡು ಹಾಗೂ ಗೋಡೆಗಳು ಕುಸಿಯುವ ಸದ್ದಿಗೆ ಮನೆಯವರಿಗೆ ಎಚ್ಚರವಾದ್ದರಿಂದ ಅದೃಷ್ಟವಶಾತ್ ಮನೆಯವರೆಲ್ಲರೂ ಜೀವ ಹಾನಿಯಿಂದ ಪಾರಾಗಿದ್ದಾರೆ. ಬೆಳೆ ಬಾಳುವ ವಸ್ತುಗಳು ಸಂಪೂರ್ಣ ನಾಶವಾಗಿವೆ.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಹಾರದ ಭರವಸೆ ನೀಡಿದ್ದಾರೆ.



















