ಆರ್. ಅಶೋಕ್ ರಾಜ್ಯ ವಿಧಾನಸಭಾ ವಿಪಕ್ಷ ನಾಯಕ. ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಎಲ್ಲಾ ಎಡವಟ್ಟುಗಳನ್ನು ವಿಧಾನಸಭಾ ಕಲಾಪಗಳಲ್ಲಿ ಎಳೆಎಳೆಯಾಗಿ ಮುಲಾಜಿಲ್ಲದೆ ಬಿಚ್ಚಿಡುವ ಆರ್. ಅಶೋಕ್ ಹಿರಿಯ ರಾಜಕಾರಣಿಯೂ ಹೌದು. ರಾಜ್ಯ ಬಿಜೆಪಿ ಸರ್ಕಾರದ ಆಡಲಿತಾವಧಿಯಲ್ಲಿ ಉಪ ಮುಖ್ಯಮಂತ್ರಿಯಾಗಿ, ಗೃಹ ಸಚಿವರಾಗಿ, ಕಂದಾಯ ಸಚಿವರಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ, ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದವರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾಗಿರಯವ ಆರ್. ಅಶೋಕ್ ಇಂದು ಬಿಜೆಪಿಯ ಮೇಲ್ಪಂಕ್ತಿಯ ನಾಯಕ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ.
ರಾಜ್ಯದಲ್ಲಿ ವಿಧಾನಸಭೆಯ ವಿಪಕ್ಷ ನಾಯಕರಾಗಿ ಆರ್.ಅಶೋಕ್ ಕಾರ್ಯನಿರ್ವಹಣೆಯ ಬಗ್ಗೆ ಬಿಜೆಪಿ ಹೈಕಮಾಂಡ್ ಗೂ ಒಳ್ಳೆಯ ಅಭಿಪ್ರಾಯವಿದೆ. ರಾಜ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕರೂ ಹೌದು. ಆದರೇ, ಆರ್.ಅಶೋಕ್ ವಿಪಕ್ಷ ನಾಯಕರಾಗಿ ಒಂದುವರೆ ವರ್ಷ ಕಳೆದರೂ ಈವರೆಗೂ ಸರ್ಕಾರಿ ನಿವಾಸ ದೊರಕಲಿಲ್ಲ ಎನ್ನುವ ಮಾಹಿತಿಯನ್ನು ಎಕ್ಸ್ ಕ್ಲ್ಯೂಸಿವ್ ಆಗಿ ಕರ್ನಾಟಕ ನ್ಯೂಸ್ ಬೀಟ್ ರಿವೀಲ್ ಮಾಡುತ್ತಿದೆ.
ಆರ್.ಅಶೋಕ್‌ಗೆ ವಿಧಾನಸಭೆಯ ವಿಪಕ್ಷ ನಾಯಕನಾದ್ರೂ ನಿವಾಸವೇಕೆ ಸಿಕ್ಕಿಲ್ಲ? ಆರ್.ಅಶೋಕ್‌ಗೆ ಸರ್ಕಾರಿ ನಿವಾಸ ಹಂಚಿಕೆ ಮಾಡದೇ ಇರಲು ಏನು ಕಾರಣ ? ಕಳೆದ ಒಂದುವರೆ ವರ್ಷಗಳ ಹಿಂದೆ ವಿಧಾನಸಭೆಯ ವಿಪಕ್ಷ ನಾಯಕರಾಗಿ ಆರ್.ಅಶೋಕ್ ಆಯ್ಕೆಯಾಗಿದ್ದರೂ ಈವರೆಗೆ ಅವರಿಗೆ ಸರ್ಕಾರಿ ನಿವಾಸ ನೀಡದೇ ಸತಾಯಿಸುತ್ತಿದೆ ಎಂಬ ಆರೋಪ ಈಗ ಬಿಜೆಪಿ ವಲಯದಿಂದ ಕೇಳಿ ಬರುತ್ತಿದೆ.
ಆಗಲೇ ಒಬ್ಬ ವಿಪಕ್ಷ ನಾಯಕನಿಗೆ ಸೌಲಭ್ಯ ಕೊಡಬೇಕಿದ್ದ ಸರ್ಕಾರ ಈವರೆಗೂ ನೀಡದೇ ಇರುವುದು ವೈಷಮ್ಯದ ರಾಜಕಾರಣಧ ಪರಮಾವಧಿ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಕೇಳಿಬರುತ್ತಿದೆ.
ಹಿಂದಿನ ಸರ್ಕಾರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಿಧಾನಸಭಾ ವಿಪಕ್ಷ ನಾಯಕರಾಗಿ ಈಗಿನ ಸಿಎಂ ಸಿದ್ಧರಾಮಯ್ಯ ಇದ್ದರು. ಅಂದು ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಿರಲಿಲ್ಲ. ಅದಕ್ಕೆ ಪ್ರತಿಕಾರವಾಗಿ ಕಾಂಗ್ರೆಸ್ ಆರ್. ಅಶೋಕ್ ಅವರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡುತ್ತಿಲ್ಲವೇ ಎಂಬ ಪ್ರಶ್ನೆ ಮೇಲೆದ್ದಿದೆ.
ಅಂದು ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕಾಗಿ ಅಂದಿನ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದರೂ ಡೊಂಟ್ ಕೇರ್ ಮನೋಭಾವ ತೋರಿಸಿತ್ತು. ಅದಕ್ಕೆ ಸೇಡು ತೀರಿಸಿಕೊಳ್ಳುವಂತೆ ಇಂದಿನ ಸರ್ಕಾರ ಧೋರಣೆ ತೋರಿಸುವಂತಿದೆ.
ಅಂದಿನ ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಸರ್ಕಾರದ ಮಾತು ಕೇಳಿ ನನ್ನನ್ನು ಕೇವಲವಾಗಿ ನಡೆಸಿಕೊಂಡಿದ್ದರು ಎನ್ನುವ ಅಭಿಪ್ರಾಯ ಸಿದ್ದರಾಮಯ್ಯ ಅವರದ್ದಾಗಿದೆ. ಇಂದು ಬಿಜೆಪಿಯವರು ಅಧಿಕಾರ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ.
ಅವರು ಅಂದು ಅಧಿಕಾರದಲ್ಲಿದ್ದಾಗ ನಡೆದುಕೊಂಡ ಮಾದರಿಯಲ್ಲಿ ನಾವು ಕೂಡ ನಡೆದುಕೊಳ್ಳಬೇಕು. “ಟಿಟ್ ಫಾರ್ ಟ್ಯಾಟ್” ಎಂಬುದನ್ನು ತೋರಿಸೋಣ ಎಂದು ಸುಮ್ಮನಾಗಿರುವಂತೆ ರಾಜ್ಯ ಸರ್ಕಾರ ಪ್ರತಿಕಾರ ತೀರಿಸಿಕೊಂಡಂತಿದೆ.
ಬಿಜೆಪಿ ಅಂದು ಸಿದ್ದರಾಮಯ್ಯ ಅವರಿಗೆ ಸರ್ಕಾರಿ ನಿವೇಶನ ನೀಡದೇ ಇರುವುದು ಮತ್ತು ಇಂದು ಕಾಂಗ್ರೆಸ್ ಸರ್ಕಾರ ಈವರೆಗೂ ವಿಧಾನಸಭೆಯ ವಿಪಕ್ಷ ನಾಯಕರಾಗಿಲಿ, ವಿಧಾನಪರಿಷತ್‌ನ ವಿಪಕ್ಷ ನಾಯಕರಾಗಲಿ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡದೇ ಸುಮ್ಮನಾಗಿರುವುದು ಪ್ರತಿಕಾರ ರಾಜಕಾರಣಕ್ಕೆ ಪುಷ್ಠಿ ನೀಡಿದಂತೆ. ಸರ್ಕಾರಗಳ ಈ ಧೊರಣೆ ನಿಜಕ್ಕೂ ವ್ಯವಸ್ಥೆಯ ದುರಂತವೇ ಸರಿ.