ಚಾಮರಾಜನಗರ : ಭಾರತೀಯ ಜನತಾ ಪಾರ್ಟಿ ಶಿಸ್ತಿನ ಪಕ್ಷ. ಪಾರ್ಟಿಗಿಂತ ದೇಶ ದೊಡ್ಡದು. ದೇಶಕ್ಕಿಂತ ಪಾರ್ಟಿ ದೊಡ್ಡದಲ್ಲ. ಭಿನ್ನಾಭಿಪ್ರಾಯ ನೂರಕ್ಕೆ ನೂರು ನಮ್ಮಲ್ಲಿ ಇಲ್ಲ. ನಮ್ಮ ಪಕ್ಷದಲ್ಲಿ ನನ್ನಂತ ಕಿಲಾಡಿಗಳು ಸಾಕಷ್ಟು ಜನ ಇದ್ದೇವೆ. ಭಿನ್ನಾಭಿಪ್ರಾಯಕ್ಕೆ ಯಾವ ರೀತಿ ಇಂಜೆಕ್ಷನ್ ಕೊಡಬೇಕೆಂದು ಗೊತ್ತಿದೆ ಎಂದು ಕೇಂದ್ರ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಕೊಳ್ಳೆಗಾಲದಲ್ಲಿ ಮಾತನಾಡಿದ ಅವರು, ಭಿನ್ನಪ್ರಾಯ ವ್ಯಕ್ತಪಡಿಸುವವರಿಗೆ ಯಾವಾಗ ಇಂಜೆಕ್ಷನ್ ಕೊಡಬೇಕು ಎನ್ನುವುದು ನಮಗೆ ಗೊತ್ತಿದೆ. ರೇಣುಕಾಚಾರ್ಯ ಟೀಂನಿಂದ ರೆಬಲ್ಸ್ ವಿರುದ್ದ ಹೈಕಮಾಂಡ್ ಗೆ ದೂರು ನೀಡಿದ್ದಾರೆ. ನಾನು ಕೂಡ ರೇಣುಕಾಚಾರ್ಯ ಅವರನ್ನು ಭೇಟಿ ಮಾಡಿದ್ದೆ. ಅವರಿಗೆ ನಾನು ಏನೇನು ಹೇಳಬೇಕೋ ಅದನ್ನು ಹೇಳಿದ್ದೇನೆ. ಇದನೆಲ್ಲ ಮರೆತು ಪಕ್ಷ ಸಂಘಟನೆಗೆ ಮುಂದಾಗಿ ಎಂದು ಸೂಚಿಸಿರುವುದಾಗಿ ಹೇಳಿದ್ದೇನೆ.
ನಾನು ರಾಷ್ಟ್ರದ ಮಂತ್ರಿ. 32 ರಾಜ್ಯಗಳಲ್ಲೂ ಕೆಲಸ ಮಾಡಬೇಕು. ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತೀರಾ ಎಂಬ ಅಪ್ರಸ್ತುತ ಪ್ರಶ್ನೆಗೆ ಉತ್ತರ ಕೊಡುವ ಸ್ಥಿತಿಯಲ್ಲಿ ನಾನಿಲ್ಲ. ನಮ್ಮ ಪಕ್ಷದಲ್ಲಿ ಒಲಿದುಬಂದರೆ, ಆಫರ್ ಕೊಟ್ಟರೆ ಎನ್ನುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.


















