ಗದಗ : ಪಕ್ಷದಲ್ಲಿ ಶಿಸ್ತು ತರಲು ಶಾಸಕರ ಜೊತೆಗೆ ಸುರ್ಜೆವಾಲಾ ಸಭೆ ಮಾಡಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಲಾಡ್ ಬಂಡವಾಳ ಬಯಲು ಮಾಡ್ತೇನೆ ಎಂದ ಪ್ರತಾಪ್ ಸಿಂಹ ಹೇಳಿಕೆ ನೀಡಿರುವ ಬಗ್ಗೆ ತಿರುಗೇಟು ನೀಡಿದ ಲಾಡ್, ಅವರಿಗೆ ಒಳ್ಳೆಯದಾಗಲಿ. ಮೊದಲಿನಿಂದಲೂ ನಾನು ಯಾರಿಗೂ ಬೈದಿಲ್ಲ.ನಮ್ಮ ಬಗ್ಗೆ ಎಕ್ಸ್ ಪೋಸ್ ಮಾಡುತ್ತಾನೆ ಅಂದರೆ ಒಳ್ಳೆಯದಲ್ವೇ ಎಂದು ಅವರು ಹೇಳಿದರು.
ದಲಿತ ಸಿಎಂ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿ, ಬಿಜೆಪಿಯವರು ನಾರಾಯಣಸ್ವಾಮಿಯನ್ನ ಮುಂದಿನ ಸಿಎಂ ಆಗಿ ಘೋಷಣೆ ಮಾಡುತ್ತಾರೆಯೇ ? ಅವರೇ ಏನಾದರೂ ಹುಟ್ಟಿಸಿಕೊಂಡು ಮಾತಾಡುತ್ತಾರೆ. ತಮ್ಮ ಅಟೆನ್ಸೆನ್ ಗಾಗಿ ಮಾತಾನಾಡುತ್ತಾರೆ. ಇನ್ನೂ ಮೂರು ವರ್ಷಗಳ ಬಳಿಕ ಚುನಾವಣೆ ಬಂದಾಗ ಆ ಬಗ್ಗೆ ತೀರ್ಮಾನ ಮಾಡುತ್ತಾರೆ. ನಮಗೂ ಹೈಕಮಾಂಡ್ ಇದೆ, ಅವರಿಗೂ ಇದೆ ಎಂದು ಹೇಳಿದ್ದಾರೆ.
2600 ಹಿಂದುಳಿದ ವರ್ಗದ ಜಾತಿಯವರು ನಮ್ಮ ದೇಶದಲ್ಲಿ ಇದ್ದಾರೆ. ಬೇರೆ ಬೇರೆ ರಾಜ್ಯದಲ್ಲಿ ಒಂದೇ ರೀತಿಯಲ್ಲಿ ಇಲ್ಲ. ಕಾನೂನಿನಲ್ಲಿ ಓಬಿಸಿ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಲಾಗುತ್ತಿದೆ. ಮೀಸಲಾತಿ ಸಮಾನವಾಗಿ ಸಿಗಬೇಕು ಎಂದು ಹೇಳಿದರು.



















