ಮೂರು ದಶಕಗಳಿಂದ ಅನೇಕ ರಾಜಕೀಯ ಪಕ್ಷಗಳು ಒಳಮೀಸಲಾತಿ ಮಾಡುತ್ತೇವೆ ಎಂದು ದಿಕ್ಕು ತಪ್ಪಿಸಿದ್ದರು. ನಾಗಮೋಹನ್ ದಾಸ್ ವರದಿಯನ್ನ ಸರ್ಕಾರ ನಿರ್ಲಕ್ಷ ಮಾಡುವ ಅನುಮಾನವಿದೆ ಎಂದು ಮಾಜಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಅವರು, ಸರ್ವೋಚ್ಚ ನ್ಯಾಯಾಲಯ ಆದೇಶದಂತೆ ಒಳಮೀಸಲಾತಿ ಜಾರಿಯಾಗಬೇಕು. ಆಗಸ್ಟ್ 1 ರಿಂದ 15 ರವಳಗೆ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡದೇ ಹೋದಲ್ಲಿ ರಾಜ್ಯದ ಮಾದಿಗ ಒಕ್ಕೂಟಗಳಿಂದ ಬಂದ್ ಗೆ ಕರೆ ನೀಡುತ್ತೆವೆ. ಸರ್ಕಾರದ ವಿರುದ್ದ ಅಸಹಾಕರ ಚಳುವಳಿಯನ್ನ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಮಾದೀಗರ ಶಕ್ತಿಯನ್ನ ಸರ್ಕಾರಕ್ಕೆ ತೋರಿಸುತ್ತೇವೆ. 11 ಲಕ್ಷ ಸ್ಟಿಕ್ಕರ್ ಗಳನ್ನ ತಿಪ್ಪೆಗೆ ಬಿಸಾಡಿದ್ದಾರೆ, ಸರಿಯಾಗಿ ಸರ್ವೆಯೂ ನಡೆಸಿಲಿಲ್ಲ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.