‘ಸುಡುಗಾಡಿಗೆ ಹೋಗಿ ತೆಂಗಿನ ಕಾಯಿ ಒಡೆದರೂ ಜಿಎಸ್‌ಟಿ ಕಟ್ಟಬೇಕಾಗಿದೆ. ದೇಶದ ಶೇ. 70ರಷ್ಟು ಜನರು ಜಿಎಸ್‌ಟಿ ಪಾವತಿಸುತ್ತಿದ್ದು, ಇದರಿಂದ ಶ್ರೀಮಂತರಿಗೆ ಮಾತ್ರ ಅನುಕೂಲವಾಗುತ್ತಿದೆ’ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದಿಂದಾಗಿ ‘ಹಾಲು, ಮೊಸರು ಅರಿಶಿಣ-ಕುಂಕುಮಕ್ಕೂ ಜಿಎಸ್‌ಟಿ ತೆರಬೇಕಾಗಿದೆ. ಅಗತ್ಯ ವಸ್ತುಗಳಿಗೂ ತೆರಿಗೆ ಕಟ್ಟಬೇಕಾಗಿದೆ. ಜನರಿಗೆ ಸುಳ್ಳು ಹೇಳಿಕೊಂಡು, ಪಿಕ್ಚರ್ ನಡೆಸಿಕೊಂಡು ಹೋಗುತ್ತಿದ್ದಾರೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’. ‘ಶ್ರೀಮಂತರ ಅಂದಾಜು 16.50 ಲಕ್ಷ ಕೋಟಿ ರೂ. ಸಾಲ ಮನ್ನಾ ಆಗಿದೆ. ರೈತರಿಗೆ, ಬಡವರಿಗೆ, ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರ ಯಾವುದೇ ಅನುಕೂಲ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗದು ರಹಿತ ವಹಿವಾಟು ಎಂಬುವುದೇ ಮೋಸದ ವ್ಯವಹಾರ. ಎಲ್ಲೆಡೆ ನಕಲಿ ನೋಟುಗಳ ವಹಿವಾಟು ಪತ್ತೆಯಾಗಿದೆ. 26,000 ಕೋಟಿ ರೂ. ನಷ್ಟು 2 ಸಾವಿರ ರೂ. ಮುಖ ಬೆಲೆಯ ನಕಲಿ ನೋಟು, 1.14 ಲಕ್ಷ ಕೋಟಿ ರೂ.ನಷ್ಟು 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಆರ್‌ಬಿಐ ಪತ್ತೆ ಮಾಡಿದೆ’ ಎಂದು ಕಿಡಿಕಾರಿದ್ದಾರೆ.