ಉಡುಪಿ: ಬೈಂದೂರು ತಾಲೂಕಿನ ಕೆರ್ಗಾಲ್ ಗ್ರಾಮದಲ್ಲಿ ಪರಿಶ್ರಮ ಕೋ-ಆಪರೇಟಿವ್ ಸೊಸೈಟಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ವೇಳೆ ಆಸ್ತಿ ಅಡಮಾನ ಸಾಲ, ವ್ಯವಹಾರ ಸಾಲ, ಚಿನ್ನಾಭರಣ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ, ಸ್ವ-ಸಹಾಯ ಗುಂಪು ಸಾಲ ಹಾಗೂ ಹಲವಾರು ಠೇವಣಿಗಳು, ಬಂಪರ್ ಆರ್ ಡಿ ಯೋಜನೆಗಳನ್ನು ಘೋಷಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಕೆ. ಗೋಪಾಲ್ ಪೂಜಾರಿ, ಸಹಕಾರ ಸಂಘವು ಗ್ರಾಹಕರ ನಡುವೆ ಹಣವನ್ನು ವರ್ಗಾಯಿಸುತ್ತದೆ. ಹಣಕಾಸಿನ ವಿಷಯಗಳಲ್ಲಿ ವಿಶ್ವಾಸ, ಪ್ರಾಮಾಣಿಕತೆ ಮತ್ತು ನಂಬಿಕೆ ಬಹಳ ಮುಖ್ಯ. ಈ ಸಂಸ್ಥೆ ವಿವಿಧ ಹಣಕಾಸು ಸಂಬಂಧಿತ ಕಾಳಜಿಗಳಿಗೆ ಕೇಂದ್ರವಾಗಿರುವುದರಿಂದ ಪರಿಶ್ರಮ ಕೋ-ಆಪರೇಟಿವ್ ಸೊಸೈಟಿಯು ಮುಂದಿನ ದಿನಗಳಲ್ಲಿ ಆರ್ಥಿಕ ಬಲಿಷ್ಠ ಸಹಕಾರಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು
ಎಸ್ ಪ್ರಕಾಶ್ ಚಂದ್ರ ಶೆಟ್ಟಿ ಕಂಬದಕೋಣೆ ರೈತರ ಸೇವಾ ಸಂಘ ನಿಯಮಿತ ಉಪ್ಪಂದ ಭದ್ರತಾ ಕೊಠಡಿ ಉದ್ಘಾಟಿಸಿ ಶುಭ ಹಾರೈಸಿದರು.
ರಾಜ್ಯ ಸಹಕಾರಿ ನೌಕರ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ ಸಹಕಾರಿ ಲಾಂಛನ ಬಿಡುಗಡೆ ಮಾಡಿದರು ಜಗದೀಶ್ ಪೂಜಾರಿ ಹಕ್ಕಾಡಿ ನಾವುಂದ ಗಣಕಯಂತ್ರ ಉದ್ಘಾಟಿಸಿದರು. ಮಹೇಂದ್ರ ಪೂಜಾರಿ ಪಾಸ್ ಬುಕ್ ಬಿಡುಗಡೆ ಮಾಡಿದರು. ಗೋಕುಲ್ ಶೆಟ್ಟಿ ಸ್ವ ಸಹಾಯ ಗುಂಪು ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ, ಸಂಸ್ಥೆ ಉಪಾಧ್ಯಕ್ಷ ಪ್ರಕಾಶ ಪೂಜಾರಿ, ನಿರ್ದೇಶಕ ಮಂಡಳಿ ಸದಸ್ಯರಾದ ನಾಗರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪೂಜಾರಿ, ನಾಗೇಶ ಖಾರ್ವಿ, ಶಶಿಧರ ಶೆಟ್ಟಿ, ವಿಜಿತ್ ನರಸಿಂಹ ಪೂಜಾರಿ, ರವೀಂದ್ರ ಪೂಜಾರಿ, ಪ್ರದ್ಯುಮ್ನ ಹೆಬ್ಬಾರ್, ನರಸಿಂಹ ಪೂಜಾರಿ, ರವೀಂದ್ರ ಪೂಜಾರಿ, ಸುರೇಶ್ ದೇವಾಡಿಗ, ಅನಿತಾ ಡಿಸೋಜಾ, ನಾಗರಾತ್ನ ಪೂಜಾರಿ ಸೇರಿದಂತೆ ಹಲವರು ಇದ್ದರು.



















