ರಾಜನಾಥ್ ಸಿಂಗ್ ಭೇಟಿ ಮಾಡಿ ಬೆಂಗಳೂರು, ಕೋಲಾರದಲ್ಲಿ ಒಂದು ವಿಜಯಪುರ, ಬೆಳಗಾವಿ ಭಾಗದಲ್ಲಿ ಡಿಫೆನ್ಸ್ ಪಾರ್ಕ್ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದೇವೆ. ಕೇಂದ್ರ ಸಚಿವರು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ರಾಜನಾಥ್ ಸಿಂಗ್ ಅವರು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಆದ್ಯತೆಯ ಮೇರೆಗೆ ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಇಸ್ರೇಲ್, ಇರಾನ್, ರಷ್ಯಾ, ಉಕ್ರೇನ್ ನಲ್ಲಿ ಆಗುತ್ತಿರುವ ಬೆಳವಣಿಗೆ ನೋಡುತ್ತಿದ್ದೇವೆ. ಏರೋಸ್ಪೇಸ್ ಗೆ ಹೆಚ್ಚಿನ ಮಹತ್ವ ಬಂದಿದೆ. 4 ಟ್ರಿಲಿಯನ್ ಡಾಲರ್ ಬಿಡುಗಡೆ ಆಗಿದೆ. ಅದಕ್ಕೆ ಏರೋಸ್ಪೇಸ್ ಮಟ್ಟದಲ್ಲಿ ಮತ್ತಷ್ಟು ತಯಾರಿ ಆಗಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.



















