ಬೆಂಗಳೂರು ಗ್ರಾಮಾಂತರ : ಆಡಳಿತದಲ್ಲಿರುವ ಪಕ್ಷಕ್ಕೆ ಪ್ರಶ್ನೆ ಮಾಡುವುದು ನಮ್ಮ ಕರ್ತವ್ಯ. ಅದನ್ನು ನಾವು ಮಾಡಿದ್ದೇವೆ. ಅದನ್ನು ಮಾಡುವ ಹಕ್ಕು ಪ್ರಜಾಪ್ರಭುತ್ವದಲ್ಲಿ ನಮಗೆ ಇದೆ. ಅದನ್ನು ಯಥಾವತ್ತಾಗಿ ಮಾಡುತ್ತಿದ್ದೇವೆ. ನಾನು ಕೇಳಿರುವ ಪ್ರಶ್ನೆಯಿಂದ ಅವರಿಗೆ ಏನಾದರೂ ಸಮಸ್ಯೆಯಾಗುತ್ತದೆ ಎಂದರೇ ನಾವೇನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸಂತೋಷ್ ಲಾಡ್ ಅವರು ಮಾಜಿ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿದ್ದಾರೆ.
ದೊಡ್ಡ ಬಳ್ಳಾಪುರದ ಓಬದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಲಾಡ್ ಅವರಿಂದ ಮೋದಿ ಜಿಡಿಪಿ ಪಾಠ ಕಲಿಯಬೇಕಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನೆ ಮಾಡುವ ಅವಕಾಶ ಇದೆ. ನನ್ನ ಪ್ರಶ್ನೆಯನ್ನು ಕೇಳಿದ್ದೇನೆ. ನನ್ನ ವಿಚಾರವನ್ನ ವಿಮರ್ಶೆ ಮಾಡಿದ್ದೇನೆ. ಅವರು ನನ್ನ ಪರ್ಸನಲ್ ವಿಚಾರ ಮಾತನಾಡಿದರೆ, ಅವರಿಗೆ ದೇವರು ಒಳ್ಳೆಯದು ಮಾಡಲಿ. ನಾವೇನು ಮೋದಿ ಅವರ ವೈಯಕ್ತಿಕ ವಿಚಾರದ ಬಗ್ಗೆ ಏನೂ ಪ್ರಶ್ನೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಲೇಬರ್ ಕಿಟ್ ಹಗರಣ, ಗಣಿ ಹಗರಣ ನಡೆಸಿದವರೆಲ್ಲ ಪ್ರಶ್ನೆ ಕೇಳುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸಚಿವ ಸಂತೋಷ್ ಲಾಡ್ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದರು. ಪ್ರತಾಪ್ ಸಿಂಹ ಟೀಕೆಗೆ ಸಚಿವ ಲಾಡ್ ತಿರುಗೇಟು ನೀಡಿದ್ದಾರೆ.



















