ದಾವಣಗೆರೆ : ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಕೊಡುತ್ತೇನೆ ಎಂದು ಹೇಳಿದ್ದರು. ಮಾತು ಕೊಟ್ಟಂತೆ ಇದೇ ಅಧಿಕಾರವಧಿಯಲ್ಲಿಯೇ ಡಿಕೆಶಿ ಅವರಿಗೆ ಸಿಎಂ ಹುದ್ದೆಯನ್ನು ಬಿಟ್ಟುಕೊಡುತ್ತಾರೆ ಎಂದು ನೊಣವಿನಕರೆ ಕಾಡಸಿದ್ಧೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅವಧಿಯಲ್ಲೇ ಸಿಎಂ ಸಿದ್ದರಾಮಯ್ಯ ತಮ್ಮ ಪದವಿಯನ್ನು ಡಿಸಿಎಂ ಡಿಕೆಶಿ ಅವರಿಗೆ ಬಿಟ್ಟು ಕೊಡಬೇಕು. ಆ ಬರವಸೆ ನಮಗೆಲ್ಲಾ ಇದೆ. ಇದೆ ಅವಧಿಯಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ.