ಉಡುಪಿ : ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅಸ್ಪೃಶ್ಯತೆ-ಜಾತೀಯತೆ ಇಲ್ಲದ ಸಂಘಟನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆರೆಸ್ಸೆಸ್ ನಿಷೇಧಕ್ಕೆ ಯತ್ನಿಸಿ, ನೆಹರು ಸೋತು ಹೋಗಿದ್ದರು ಎಂದು ಕೇಂದ್ರ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯತ್ನ ವಿಫಲವಾದಾಗ ನೆಹರೂ ಅವರು ಈ ವಿಚಾರವನ್ನು ಕೈಬಿಟ್ಟಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಯತ್ನ ಕೂಡ ಫಲಿಸಿಲ್ಲ. ರಾಹುಲ್ ಗಾಂಧಿ ಕೂಡ ಅದೇ ಯತ್ನದಲ್ಲಿದ್ದಾರೆ. ಸುಮ್ಮನೆ ಆರೆಸ್ಸೆಸ್ ಮುಚ್ಚುವ ವ್ಯರ್ಥ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾರೆ.
ತಮ್ಮ ಇಲಾಖೆ ಅಭಿವೃದ್ಧಿ, ಬಡವರ ಕಲ್ಯಾಣದ ಕಡೆಗೆ ಗಮನ ಹರಿಸಲಿ. ಆರೆಸ್ಸೆಸ್ ಬಗ್ಗೆ ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಅಂಥವರು ಹಗುರವಾಗಿ ಮಾತನಾಡದೆ ಒಳ್ಳೆಯದು ಮಾತನಾಡಲಿ. ಕಾಂಗ್ರೆಸ್ ಪಕ್ಷವು ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ಮಾನಸಿಕತೆಗೆ ಸಮರ್ಥನೆ ನೀಡಿದರೆ, ಆರೆಸ್ಸೆಸ್ ಭಾರತ್ ಮಾತಾ ಕೀ ಜೈ ಎನ್ನುವುದನ್ನು ಕಲಿಸುತ್ತದೆ ಎಂದಿದ್ದಾರೆ.


















