ಚಿಕ್ಕಬಳ್ಳಾಪುರ : ಮೆಕೇದಾಟು ಯೋಜನೆ ಬಗ್ಗೆ ಕಾಂಗ್ರೆಸ್ ನೀರಾಸಕ್ತಿ ತೋರಿಸಲಾಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಗೌರಿಬಿದನೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎನ್ ಡಿ ಸರ್ಕಾರದ ಜೊತೆ ಯಾರು ಇದ್ದಾರೆ? ಆ ಯೋಜನೆಗೆ ನೀವು ಅನುಮತಿ ತೆಗೆದುಕೊಂಡು ಬನ್ನಿ. ನಮ್ಮದು ಏನೂ ಅಭ್ಯಂತರ ಇಲ್ಲ ಎಂದಿದ್ದಾರೆ.
ರೈತರಿಗೆ ಒಳ್ಳಯದಾಗಬೇಕು ಎಂಬುವುದು ನಮ್ಮ ಉದ್ದೇಶ. ನೀರಾವರಿ ಯೋಜನೆ ಬಗ್ಗೆ ಕುಮಾರಣ್ಣ, ದೇವೇಗೌಡರಿಗೆ ಕ್ರೆಡಿಟ್ ಸಿಗುತ್ತೆ ಹಾಗೂ ಸಿಗುವುದಿಲ್ಲ ಎಂಬುವುದು ವಿಚಾರವಲ್ಲ. ಇದು ರೈತರ ಜೀವನದ ಪ್ರಶ್ನೆ. ಹೀಗಾಗಿ ತಮಿಳು ಸರ್ಕಾರದ ಜೊತೆ ಕೂತು ಚರ್ಚೆ ಮಾಡಿ ಅನುಮತಿ ತೆಗೆದುಕೊಂಡು ಮೇಕೇದಾಟು ಪಾದಯಾತ್ರೆ ಮಾಡಿದ್ದು ನಾವಲ್ಲ. ನಮ್ಮನೀರು ನಮ್ಮಹಕ್ಕು ಎಂದು ಮಾಡಿದ್ದು ಉಪ ಮುಖ್ಯಮಂತ್ರಿ ಡಿಕೆಶಿ ಅವರು. ಅವರಿಗೂ ಅಷ್ಟೇ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.


















