ಡಾ.ರಾಜ್‌ಕುಮಾರ್ ಹಾಗೂ ಕನ್ನಡದ ಕಟ್ಟಾಳುಗಳ ಆಸರೆಯಲ್ಲಿ ನಡೆದ ಗೋಕಾಕ್ ಚಳುವಳಿಯ ಕನ್ನಡ ಪರ ಅಂದೋಲನದ ಪ್ರತಿಫಲವಾಗಿ ಪ್ರಥಮ ಭಾಷೆ ಕನ್ನಡಕ್ಕೆ 125 ಅಂಕಗಳನ್ನು ನಿಗದಿಪಡಿಸಲಾಗಿದೆ.
ಇದರ ಇತಿಹಾಸವೇ ಗೊತ್ತಿಲ್ಲದೇ, 100 ಅಂಕಕ್ಕೆ ಕನ್ನಡವನ್ನು ಇಳಿಕೆ ಮಾಡಲು ಹೊರಟಿರುವುದು ಮೂರ್ಖತನದ ಪರಮಾವಧಿ ಎಂದು ಸಚಿವ ವಿ. ಸೋಮಣ್ಣ ಮಧು ಬಂಗಾರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.
ಕನ್ನಡದ ಆಸ್ತಿತ್ವವನ್ನೆ, ಪ್ರಶ್ನಿಸುವಂತಿರುವ ಈ ನಿರ್ಧಾರ ಕನ್ನಡ ಭಾಷೆಗೆ ಮಾಡುವ ದ್ರೋಹ. ಇದನ್ನು ಮಧು ಬಂಗಾರಪ್ಪ ಅರಿತುಕೊಳ್ಳಬೇಕು. ಕನ್ನಡ ದೇಶಗಳನ್ನು ದಾಟಿದ ಸಂವೇದನೆ. ಸ್ಥಳೀಯ ಕನ್ನಡದ ಬೇರುಗಳಿಗೆ ಧಕ್ಕೆ ತರುವಂತಹ ಹಾಗೂ ಕನ್ನಡಕ್ಕೆ ದ್ರೋಹ ಎಸೆಗುವಂತಹ ಆದೇಶ ತರಲು ಸರ್ಕಾರಕ್ಕೆ ಎಷ್ಟು ಧೈರ್ಯ? ಎಂದವರು ಪ್ರಶ್ನಿಸಿದ್ದಾರೆ. ಮಾತೃ ಭಾಷೆಗಳ ಮಹತ್ವ ಕುಗ್ಗಿಸುವಂತಹ ಕನ್ನಡ ವಿರೋಧಿ ನಿರ್ಧಾರ ಕೂಡಲೇ ಸರ್ಕಾರ ಹಿಂಪಡೆಯಬೇಕೆಂದು ಸೋಮಣ್ಣ ಆಗ್ರಹಿಸಿದ್ದಾರೆ.