ಬೆಂಗಳೂರು : ಶಾಪಿಂಗ್ ಮಾಲ್ ವೊಂದರಲ್ಲಿ ರೌಡಿಶೀಟರ್ ಅಟ್ಟಹಾಸ ಮೆರೆದಿರುವ ಘಟನೆ ಬೆಂಗಳೂರಿನ ಅಶೋಕ ನಗರದಲ್ಲಿ ನಡೆದಿದೆ.
ಶಾಪಿಂಗ್ ಮಾಡಿ ಹಣ ಕೇಳಿದ್ದಕ್ಕೆ ರೌಡಿಶೀಟರ್ ಇಮ್ರಾನ್ ಯಾನೆ ಅಲಿಯಾಸ್ ಗೋಲಿ ಇಮ್ರಾನ್ ಚೂರಿ ತೋರಿಸಿ ಬೆದರಿಕೆ ಹಾಕಿದ್ದಾನೆ. ಕಳೆದ ಶನಿವಾರ್ ರಿಚ್ಮಂಡ್ ರಸ್ತೆಯಲ್ಲಿ ಶಾಪಿಂಗ್ ಗೆ ಬಂದಿದ್ದ ಇಮ್ರಾನ್, ಶಾಪಿಂಗ್ ನಂತರ ಹಣ ಕೇಳಿದ್ದಕ್ಕೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ.
ಕೂಡಲೇ ಅಶೋಕನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರು ಕೂಡ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಾವಳಿಯನ್ನು ಮಾಲ್ ನ ಮಾಲೀಕರು ಬಿಡುಗಡೆ ಮಾಡಿದ್ದಾರೆ. ಸಿಸಿಟಿವಿ ವೈರಲ್ ಆದ ಬಳಿಕ ಗೋಲಿ ಇಮ್ರಾನ್ ನನ್ನು ಬಂಧಿಸಲಾಗಿದೆ. ಗೋಲಿ ಇಮ್ರಾನ್ ಅಶೋಕನಗರ ಬಿ ಪಟ್ಟಿ ರೌಡಿಶೀಟರ್ ಎಂದು ತಿಳಿದು ಬಂದಿದೆ.