ಸ್ಯಾಂಡಲ್ ವುಡ್ ನಟ ದರ್ಶನ್ ವಿದೇಶ ಪ್ರವಾಸ ಭಾಗ್ಯ ಇಂದು ಇತ್ಯರ್ಥವಾಗಲಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎರಡನೇ ಆರೋಪಿಯಾಗಿರುವ ದರ್ಶನ್, ತಮ್ಮ ಡೆವಿಲ್ ಸಿನಿಮಾ ಶೂಟಿಂಗ್ ಗಾಗಿ ದುಬೈ ಹಾಗೂ ಯುರೋಪ್ ಗೆ ತೆರಳಲು ಅನುಮತಿ ನೀಡಿ ಅಂತಾ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತ ಅಂತಿಮ ಆದೇಶ ಇಂದು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ಹೊರಬೀಳಲಿದೆ. ಈ ಹಿಂದೆ ಜುಲೈ 1ರಿಂದ 25ರ ವರೆಗೂ ದುಬೈಗೆ ತೆರಳಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಕೋರ್ಟ್ ಅನುಮತಿ ನೀಡಿತ್ತು. ಆದ್ರೆ ಸಿನಿಮಾದ ಚಿತ್ರೀಕರಣ ದಿನಾಂಕ ಅಂತಿಮವಾಗದ ಹಿನ್ನೆಲೆಯಲ್ಲಿ ಈ ಪ್ರವಾಸ ಸಾಧ್ಯವಾಗಿರಲಿಲ್ಲ.
ಹೀಗಾಗಿ ಮರು ಅರ್ಜಿ ಸಲ್ಲಿಸಿದ್ದ ದರ್ಶನ್, ಜುಲೈ 11ರಿಂದ 30ರವೆಗೂ ದುಬೈ ಹಾಗೂ ಯುರೋಪ್ ಪ್ರವಾಸಕ್ಕೆ ತೆರಳಲು ಅನುಮತಿ ಕೋರಿದ್ದಾರೆ. ಹೀಗಾಗಿ ಅವರ ವಿದೇಶ ಪ್ರವಾಸದ ಹಣೆಬರದ ಇದು ತೀರ್ಮಾನವಾಗಲಿದೆ.