ಧಾರವಾಡ : ಸಿಎಂ ಸಿದ್ಧರಾಮಯ್ಯ ಅವರು ದೇಶ ಕಂಡಂತಹ ಮಾಸ್ ಲೀಡರ್. ಎಂದಿಗೂ ಕೂಡ ಸಿದ್ಧರಾಮಯ್ಯ ಅವರ ಜನಪ್ರಿಯತೆ ಬರಿ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಅವರ ಜನಪ್ರಿಯತೆ ಇಡೀ ದೇಶದಾದ್ಯಂತ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಾಧ್ಯಮಗಳ ವರದಿಗಾರರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ಮೊದಲಿನಿಂದ ಕಾಂಗ್ರೆಸ್ ಪಕ್ಷದ ಕಾಳಜಿ ಹಾಗೂ ಕಳಕಳಿ ಹಿಂದೂಳಿದ ಮತ್ತು ದಮನಿತರ, ಮಹಿಳೆ ಬಡವರ ಪರ ಇದೆ. ಸಿಎಂ ಸಿದ್ದರಾಮಯ್ಯ ಅವರೂ ಈ ಎಲ್ಲಾ ಕಾಳಜಿ ಹೊಂದಿದವರು. ಅದಕ್ಕಾಗಿ ಅವರೊಬ್ಬ ಮಾಸ್ ಲೀಡರ್. ಮಾತ್ರವಲ್ಲ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ದಗಗಳ ಧೀಮಂತ ನಾಯಕ ಎಂದು ಅವರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಸೇವೆ ವಿಸ್ತಾರ ಮಾಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ, ಇದು ಒಳ್ಳೆಯ ವಿಚಾರ. ಇದರಲ್ಲಿಯೂ ಬಿಜೆಪಿ ಏನಾದರೂ ಹುಡುಕುತ್ತಿದ್ದರೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಸ್ವಾಮಿಜಿಗಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಪ್ರೀತಿ ಮತ್ತು ಆಶೀರ್ವಾದಕ್ಕೆ ಅವರು ಮಾತಾನಾಡುತ್ತಾರೆ. ಆದರೆ ಕಾಂಗ್ರೆಸ್ ಒಂದು ಶಿಸ್ತಿನ ಪಕ್ಷ. ಕಾಂಗ್ರೆಸ್ ಪಕ್ಷದ ನಾಯಕರು ಹೈಕಮಾಂಡ್ ಹೇಳಿದ್ದನ್ನು ಕೇಳುತ್ತದೆ. ಸಿಎಂ ಬದಲಾವಣೆ ಬಗ್ಗೆ ಯಾರು ಯಾವಾಗ ಗಡುವು ಕೊಟ್ಟಿದ್ದಾರೆ ಗೊತ್ತಿಲ್ಲ. ಏನಿದ್ದರೂ ನಮ್ಮ ಹೈಕಮಾಂಡ್, ಪಕ್ಷದ ವರಿಷ್ಠರು, ನಾಯಕರು ಇದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.