ಬೆಂಗಳೂರು : ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಎರಡನೇ ಹಂತದ ಸಭೆ ನಡೆಸುತ್ತಿದ್ದು, ಶಾಸಕರೊಂದಿಗೆ ಸುರ್ಜೇವಾಲ ಒನ್ ಟು ಒನ್ ಮೀಟೀಮಗ್ ನಡೆಸಲಿದ್ದಾರೆ. ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರಿಂದ ಸುರ್ಜೇವಾಲ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಆಯಾಯ ಕ್ಷೇತ್ರದಲ್ಲಿ ಆಗದೇ ಇರುವ ಕೆಲಸಗಳ ಬಗ್ಗೆಯೂ ಮಾಹಿತಿ ಸಂಗ್ರಹ ಪಡೆದುಕೊಳ್ಳುವುದರ ಜೊತೆಗೆ ಶಾಸಕರ ಅಹವಾಲು ಸ್ವೀಕಾರ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಶಾಸಕರರೊಂದಿಗೆ ಸಭೆ ನಡೆಸಿದ ಬಳಿಕ ಸಚಿವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಬಳಿಕ ಕಾಂಗ್ರೆಸ್ ಸಂಸದರಿಗೂ ಬುಲಾವ್ ನೀಡಲಿದ್ದಾರೆ ಎಂದು ಹೇಳಲಾಗಿದೆ. ಮಾತ್ರವಲ್ಲದೇ, ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಈಗ ಚರ್ಚೆಯಾಗುತ್ತಿರುವ ಸಚಿವ ಸಂಪುಟ ಪುನರ್ ರಚನೆ ಬಗ್ಗೆಯೂ ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಸಚಿವ ಸಂಪುಟ ಪುನರ್ ರಚನೆಗೆ ಎಲ್ಲ ಶಾಸಕರ ಒಲವಿದೆಯೇ? ಎನ್ನುವುದನ್ನು ಈ ಸಭೆಯ ಮೂಲಕ ತಿಳಿದುಕೊಳ್ಳಲಿದ್ದಾರೆ.
ಈಗಾಗಲೇ ಸಚಿವರಿಂದ ರಿಪೋರ್ಟ್ ಕಾರ್ಡ್ ನ್ನು ಹೈಕಮಾಂಡ್ ಪಡೆದುಕೊಂಡಿದೆ. ಮಾತ್ರವಲ್ಲದೇ, ಆಯಾ ಇಲಾಖೆಗೆ ಸಂಬಂಧಿಸಿ 5 ಪ್ರಶ್ನೆಗಳ ರಿಪೋರ್ಟ್ ಕಾರ್ಡ್ ಅನ್ನು ಕೂಡ ಪಡೆದುಕೊಂಡಿದೆ. ಸಚಿವರ ರಿಪೋರ್ಟ್ ಆಧರಿಸಿ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ.
ಒಟ್ಟಿನಲ್ಲಿ, ಈ ಸಭೆಯಲ್ಲಿ ತಿಳಿದು ಬರುವ ಅಭಿಪ್ರಾಯದ ಆಧಾರದ ಮೇಲೆ ಸಂಪುಟ ಪುನರ್ ರಚನೆ ಮಾಡಬೇಕಾ ಬೇಡವೇ ಅನ್ನುವುದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ.