ಉಡುಪಿ : ಅಮೇರಿಕಾದ ಡಲ್ಲಾಸ್ ಅಲ್ಲಿರುವ ಉಡುಪಿಯ ಪುತ್ತಿಗೆ ಮಠದಲ್ಲಿ ಪ್ರತಿಷ್ಠಾಪನೆಗಾಗಿ ಕೃಷ್ಣನ ವಿಗ್ರಹ ಸಿದ್ಧಗೊಂಡಿದೆ.
ಭಾರತೀಯ ಸನಾತನ ಸಂಸ್ಕೃತಿಯ ಪ್ರಚಾರದ ಅಂಗವಾಗಿ ವಿಶ್ವದಾದ್ಯಂತ ಕೃಷ್ಣ ಮಂದಿರಗಳನ್ನು ಸ್ಥಾಪಿಸಿದ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದ ಅಪೇಕ್ಷೆಯಂತೆ ಅಮೇರಿಕಾದ ಡಲ್ಲಾಸ್ ನಲ್ಲಿ ಕೃಷ್ಣನ ಪ್ರತಿಷ್ಠಾಪನೆಗೆ ಈಗ ಮೂಹೂರ್ತ ಕೂಡಿ ಬಂದಿದೆ.
ಕಡೂರಿನ ಶಿಲ್ಪಿ ತೀರ್ಥರಾಜ್ ಮತ್ತು ಅವರ ತಂಡದವರು ಕೃಷ್ಣನ ಮೂರ್ತಿಯನ್ನು ತಯಾರಿಸಿದ್ದು, ಮುಖ್ಯಪ್ರಾಣ ದೇವರ ಸಹಿತವಾಗಿ ಜು. 4 ರಂದು ಕೃಷ್ಣ ಮಠದ ಗೀತಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಗುಣೇಂದ್ರ ತೀರ್ಥರಿಗೆ ಕೃಷ್ಣನ ಮೂರ್ತಿಯನ್ನು ಹಸ್ತಾಂತರ ಮಾಡಿದರು.
ಕೃಷ್ಣ ಮೂರ್ತಿಗೆ ಆರತಿ ಬೆಳಗುವುದರ ಮೂಲಕ ಶ್ರೀಗಳು ಬರಮಾಡಿಕೊಂಡರು. ಶಿಲ್ಪಿಗಳಿಗೆ ಕೃಷ್ಣನ ಅನುಗ್ರಹ ಪ್ರಸಾದ ನೀಡುವುದರ ಮೂಲಕ ಹರಸಿದರು. ಈ ಸಂದರ್ಭದಲ್ಲಿ ದಿವಾನರಾದ ನಾಗರಾಜಾಚಾರ್ಯ, ಕಾರ್ಯದರ್ಶಿ ರತೀಶ್ ತಂತ್ರಿ ಉಪಸ್ಥಿತರಿದ್ದರು.



















