ಭಾರತೀಯ ಮಾದಕದ್ರವ್ಯ ನಿಯಂತ್ರಣ ಮಂಡಳಿ ನಡೆಸಿದ “ಆಪರೇಷನ್ ಮೆಡ್ ಮ್ಯಾಕ್ಸ್ ” ಕಾರ್ಯಾಚರಣೆಯಲ್ಲಿ ಉಡುಪಿಯಲ್ಲಿ ಕಾಲ್ ಸೆಂಟರ್ ಇಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ವಿಷಯವಾಗಿ ಮಾತನಾಡಿರುವ ಉಡುಪಿ ಎಸ್ಪಿ, ಮಾದಕದ್ರವ್ಯ ವಿಚಾರವಾಗಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಉಡುಪಿಯ ಮಣಿಪಾಲದಲ್ಲಿ ಈ ಹಿಂದೆಯೂ ಡ್ರಗ್ಸ್ ವಿಚಾರವಾಗಿ ಒಂದಿಷ್ಟು ಪ್ರಕರಣಗಳು ದಾಖಲಾಗಿದ್ದವು. ಇದೀಗ ಎಸ್ಪಿ ಹರಿರಾಮ್ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ಈ ವಿಚಾರವಾಗಿ ಮಾಹಿತಿ ದೊರಕಿದಲ್ಲಿ ತಕ್ಷಣ ಹತ್ತಿರದ ಠಾಣೆಗೆ ತಿಳಿಸುವಂತೆ ಸೂಚಿಸಿದ್ದಾರೆ.
ಮಾದಕ ದ್ರವ್ಯ ಪ್ರಕರಣ ಸಂಬಂಧಿಸಿದಂತೆ 2022ರಲ್ಲಿ 282 ಮಂದಿ, 2023ರಲ್ಲಿ 304 ಮಂದಿ, 2024ರಲ್ಲಿ 153 ಮಂದಿ ಹಾಗೂ 2025ರ 6 ತಿಂಗಳ ಅವಧಿಯಲ್ಲಿ 107 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.